ಭಾರತ ಟಿ20: ಐರ್ಲೆಂಡ್ ತಂಡದಲ್ಲಿ ಪಂಜಾಬ್’ನ ’ಸಿಮಿ’..!

Punjab born Simi Singh in Ireland squad for India T20s
Highlights

ಸಿಮ್ರನ್‌ಜಿತ್, ಪಂಜಾಬ್‌ನ ಖರಾರ್ ಜಿಲ್ಲೆಯಲ್ಲಿ ಜನಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಡುಬ್ಲಿನ್(ಜೂ.24]: ಜೂನ್ 27 ಮತ್ತು 29 ರಂದು ಭಾರತ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟಿ20 ಸರಣಿಗೆ 14 ಆಟಗಾರರ ಐರ್ಲೆಂಡ್ ತಂಡ ಪ್ರಕಟಗೊಂಡಿದೆ.

ತಂಡದಲ್ಲಿ ಪಂಜಾಬ್ ಮೂಲದ ಆಫ್ ಸ್ಪಿನ್ನರ್ ಸಿಮ್ರನ್‌ಜಿತ್ ‘ಸಿಮಿ’ ಸಿಂಗ್ ಸ್ಥಾನ ಪಡೆದಿದ್ದಾರೆ. ಸಿಮ್ರನ್ ಜಿತ್ ಈಗಾಗಲೇ ಐರ್ಲೆಂಡ್ ವಿರುದ್ಧ 7 ಏಕದಿನ ಹಾಗೂ 4 ಟಿ20 ಪಂದ್ಯಗಳನ್ನು ಆಡಿದ್ದಾರೆ.  ಸಿಮ್ರನ್‌ಜಿತ್, ಪಂಜಾಬ್‌ನ ಖರಾರ್ ಜಿಲ್ಲೆಯಲ್ಲಿ ಜನಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಭಾರತ ತಂಡವು ಈ ಮೊದಲು ಐರ್ಲೆಂಡ್ ವಿರುದ್ಧ ಏಕೈಕ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದೆ. 2009ರಲ್ಲಿ ಇಂಗ್ಲೆಂಡ್’ನಲ್ಲಿ ವಿಶ್ವ ಟಿ20 ಟೂರ್ನಿಯಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಭಾರತ 8 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿತ್ತು.

loader