ಇಲ್ಲಿಯವರೆಗೆ ಶೆಹಜೈಬ್ ಪಾಕಿಸ್ತಾನ ಪರ 10 ಟಿ20 ಹಾಗೂ 3 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು.  

ಕರಾಚಿ(ಫೆ.28): ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಪಾಲ್ಗೊಂಡಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್'ಮನ್ ಶೆಹಜೈಬ್ ಹಸನ್ ಅವರನ್ನು ಒಂದು ವರ್ಷದ ಮಟ್ಟಿಗೆ ಅಮಾನತುಗೊಳಿಸಲಾಗಿದೆ.

ಪಿಸಿಬಿ ರಚಿಸಿದ್ದ ಸಮಿತಿಯ ವರದಿ ಮೇರೆಗೆ ನಿಷೇಧ ಹೇರಲಾಗಿದ್ದು, ಸ್ಪಾಟ್ ಫಿಕ್ಸಿಂಗ್'ನಡಿ ನಿಷೇಧಕ್ಕೆ ಒಳಗಾದ 5ನೇ ಪಾಕ್ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಶೆಹಜೈಬ್ ಪಾತ್ರರಾಗಿದ್ದಾರೆ. ದುಬೈನಲ್ಲಿ ನಡೆದ ಎರಡನೇ ಆವೃತ್ತಿಯ ಪಿಎಸ್'ಎಲ್'ನಲ್ಲಿ ಸ್ಪಾಟ್ ಫಿಕ್ಸಿಂಗ್'ನಲ್ಲಿ ಶೆಹಜೈಬ್ ಪಾಲ್ಗೊಂಡಿರುವುದು ಸಾಬೀತಾಗಿತ್ತು.

ಇಲ್ಲಿಯವರೆಗೆ ಶೆಹಜೈಬ್ ಪಾಕಿಸ್ತಾನ ಪರ 10 ಟಿ20 ಹಾಗೂ 3 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದರು.