Asianet Suvarna News Asianet Suvarna News

ಆಸ್ಪ್ರೇಲಿಯಾಗೆ ವೈಟ್'ವಾಶ್ ಮುಖಭಂಗ

ಏಕದಿನ ಪಂದ್ಯಗಳ ಸರಣಿಯೊಂದರಲ್ಲಿ ಆಸೀಸ್ತಂಡ 5-0 ಅಂತದಲ್ಲಿ ವೈಟ್‌​ವಾಷ್ಮುಖಭಂಗ ಅನುವಿಸಿರುವುದು ಇತಿಹಾದಲ್ಲಿ ಇದೇ ಮೊದಲು.

Proteas whitewash Australia in ODI Series

ಕೇಪ್‌​ಟೌ​ನ್‌(ಅ.13): ವಿಶ್ವ ಕ್ರಿಕೆಟ್‌ನಲ್ಲೇ ಬಲಿಷ್ಠ ಬಲಿಷ್ಠ ತಂಡ​ವೆಂದು ಕರೆಸಿಕೊಳ್ಳುವ ಹಾಲಿ ಏಕ​ದಿನ ವಿಶ್ವ​ಕಪ್‌ ಚಾಂಪಿ​ಯನ್‌ ಆಸ್ಪ್ರೇ​ಲಿಯಾ ತಂಡ, ದಕ್ಷಿಣ ಆಫ್ರಿಕಾ ನೆಲ​ದಲ್ಲಿ ಮುಕ್ತಾಯ ಕಂಡ ದ.ಆಫ್ರಿಕಾ ವಿರು​ದ್ಧದ ಐದು ಪಂದ್ಯ​ಗಳ ಏಕ​ದಿನ ಸರ​ಣಿ​ಯನ್ನು 0-5 ಅಂತ​ರ​ದಲ್ಲಿ ಸೋತು ಮುಖಭಂಗ ಅನುಭವಿಸಿದೆ.

ಏಕ​ದಿನ ಪಂದ್ಯ​ಗಳ ಸರ​ಣಿ​ಯೊಂದ​ರಲ್ಲಿ ಆಸೀಸ್‌ ತಂಡ 5-0 ಅಂತ​ರ​ದಲ್ಲಿ ವೈಟ್‌​ವಾಷ್‌ ಮುಖ​ಭಂಗ ಅನು​ಭ​ವಿ​ಸಿ​ರು​ವುದು ಇತಿ​ಹಾ​ಸ​ದಲ್ಲಿ ಇದೇ ಮೊದಲು.

ಇಲ್ಲಿನ ನ್ಯೂ ಲ್ಯಾಂಡ್ಸ್‌ ಕ್ರೀಡಾಂಗ​ಣ​ದಲ್ಲಿ ನಡೆ​ದ ಸರ​ಣಿಯ ಅಂತಿಮ ಪಂದ್ಯ​ದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ, ನಿಗ​ದಿತ 50 ಓವ​ರ್‌​ಗ​ಳಲ್ಲಿ 327 ರನ್‌ ಗಳಿ​ಸಿ​ದರೆ, ಈ ಮೊತ್ತ ಬೆನ್ನ​ಟ್ಟಿದ ಆಸೀಸ್‌, 48.2 ಓವ​ರ್‌​ಗ​ಳಲ್ಲಿ 296 ರನ್‌​ಗ​ಳಿಗೆ ಆಲೌಟ್‌ ಆಯಿತು.

ಸೆ. 30ರಂದು ನಡೆ​ದಿದ್ದ ಮೊದಲ ಏಕ​ದಿನ ಪಂದ್ಯ​ದಲ್ಲಿ 6 ವಿಕೆ​ಟ್‌​ಗಳ ಸೋಲನು​ಭ​ವಿ​ಸಿದ್ದ ಆಸ್ಪ್ರೇ​ಲಿಯಾ, ದ್ವಿತೀಯ ಏಕ​ದಿನ ಪಂದ್ಯ​ದಲ್ಲಿ (ಅ. 2ರಂದು) 142 ರನ್‌​ಗಳ ಭಾರೀ ಸೋಲು ಕಂಡಿತ್ತು. ಇನ್ನು, ಅ. 5ರಂದು ನಡೆ​ದಿದ್ದ ಮೂರನೇ ಏಕ​ದಿನ ಪಂದ್ಯ​ದಲ್ಲಿ ಪುನಃ 4 ವಿಕೆಟ್‌ ಸೋಲುಂಡಿದ್ದ ಆಸೀಸ್‌ ಪಡೆ, ಅ. 9ರಂದು ನಡೆ​ದಿದ್ದ ನಾಲ್ಕನೇ ಏಕ​ದಿನ ಪಂದ್ಯ​ದಲ್ಲಿ 6 ವಿಕೆಟ್‌ ಪರಾ​ಭವ ಹೊಂದಿತ್ತು.

ವೈಟ್‌​ವಾಶ್‌ ಇದೇ ಮೊದ​ಲೇ​ನಲ್ಲ...

ಅಂದ​ಹಾಗೆ, ಏಕ​ದಿನ ಮಾದ​ರಿ​ಯಲ್ಲಿ ಆಸೀಸ್‌ ತಂಡ ಹೀಗೆ ವೈಟ್‌​ವಾಷ್‌ ಅನು​ಭ​ವಿ​ಸು​ತ್ತಿ​ರು​ವುದು ಇದೇನೂ ಮೊದಲಲ್ಲ. 2012ರಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದ ವೇಳೆ ನಾಲ್ಕು ಪಂದ್ಯ​ಗಳ ಸರ​ಣಿ​ಯನ್ನು 0-4 ಅಂತ​ರ​ದಲ್ಲಿ ಸೋತಿತ್ತು. ಅದಕ್ಕೂ ಹಿಂದೆ, 1980ರಲ್ಲಿ ಇಂಗ್ಲೆಂಡ್‌ ವಿರು​ದ್ಧವೇ 0-2 ಅಂತ​ರ​ದಲ್ಲಿ ಸರಣಿ ಸೋತಿದ್ದ ಅದು, 1982/83ರಲ್ಲಿ ಪಾಕಿ​ಸ್ತಾನ, ಶ್ರೀಲಂಕಾ ವಿರು​ದ್ಧವೂ 0-2 ಅಂತ​ರ​ದಲ್ಲಿ, 1997ರಲ್ಲಿ ಇಂಗ್ಲೆಂಡ್‌ ವಿರುದ್ಧ 0-3 ಅಂತ​ರ​ದಲ್ಲಿ, 2006/07ರಲ್ಲಿ ನ್ಯೂಜಿ​ಲೆಂಡ್‌ ವಿರುದ್ಧ 0-4 ಅಂತ​ರ​ದಲ್ಲಿ ವೈಟ್‌​ವಾಷ್‌ ಅನು​ಭ​ವಿ​ಸಿತ್ತು.

ಅತಿ ಹೆಚ್ಚು ವೈಟ್‌ವಾಷ್‌ ಅನು​ಭ​ವಿ​ಸಿದ ತಂಡ​ಗಳ ಪಟ್ಟಿ

ಜಿಂಬಾಬ್ವೆ 8

ವೆಸ್ಟ್‌ ಇಂಡೀಸ್‌ 6

ನ್ಯೂಜಿ​ಲೆಂಡ್‌ 4

ಇಂಗ್ಲೆಂಡ್‌ 3

ಭಾರತ 2

Latest Videos
Follow Us:
Download App:
  • android
  • ios