ಮುಂಬೈ(ಮಾ.02): ಪ್ರೊ ಕಬಡ್ಡಿಯ ಪುಣೇರಿ ಪಲ್ಟನ್‌ ತಂಡ, ಶುಕ್ರವಾರ ತನ್ನ ಹೊಸ ಲಾಂಛನವನ್ನು ಅನಾವರಣ ಮಾಡಿದೆ. ನೂತನ ಲಾಂಛನವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಗೊಳಿಸಿರುವ ಪಲ್ಟನ್‌ ಫ್ರಾಂಚೈಸಿ, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಾಗಿ ಹೇಳಿದೆ.

ಇದನ್ನೂ ಓದಿ: ವಿಂಗ್ ಕಮಾಂಡರ್ ಅಭಿನಂದನ್‌ ಜರ್ಸಿ ಬಿಡುಗಡೆ ಮಾಡಿದ ಬಿಸಿಸಿಐ!

 

 

‘ರಾಜಮುದ್ರ’ ಮತ್ತು ಸಿಂಹದ ಮುಖದ ಮೇಲೆ ‘ತಿಲಕ’ವನ್ನು ಹೊಸ ಲಾಂಛನದಲ್ಲಿ ಬಳಸಲಾಗಿದೆ. ಇದು ತಂಡದ ಆಟಗಾರರಿಗೆ ಶ್ರೀರಕ್ಷೆ ಇದ್ದಂತೆ ಎಂದು ಪುಣೇರಿ ಸಿಇಒ ಕೈಲಾಶ್‌ ಖಂಡಪಾಲ್‌ ಹೇಳಿದ್ದಾರೆ.