Pro Kabaddi: ಮತ್ತೊಮ್ಮೆ ಮುಗ್ಗರಿಸಿದ ಬೆಂಗಳೂರು ಬುಲ್ಸ್‌!

ಸತತ ಎರಡು ಪಂದ್ಯಗಳ ಗೆಲುವಿನೊಂದಿಗೆ ಭರ್ಜರಿಯಾಗಿ ಪ್ರೊ ಕಬಡ್ಡಿ ಲೀಗ್‌ ಅಭಿಯಾನ ಆರಂಭ ಮಾಡಿದ್ದ ಬೆಂಗಳೂರು ಬುಲ್ಸ್‌, ಲೀಗ್‌ನಲ್ಲಿ ಸತತ 2ನೇ ಸೋಲು ಕಂಡಿದೆ. ಭಾನುವಾರ ನಡೆದ ಪಂದ್ಯದಲ್ಲಿ ಬುಲ್ಸ್‌, ಯುಪಿ ಯೋಧಾ ತಂಡದ ವಿರುದ್ಧ ಸೋಲು ಕಂಡಿದೆ.

Pro Kabaddi Season 9 Bengaluru Bulls face another defeat vs UP Yoddha san

ಬೆಂಗಳೂರು (ಅ.16): ಪ್ರದೀಪ್‌ ನರ್ವಾಲ್‌ ಹಾಗೂ ಸುರೇಂದರ್‌ ಗಿಲ್‌ ಆರ್ಭಟದ ಮುಂದೆ ಸಂಪೂರ್ಣವಾಗಿ ಮಂಕಾದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ನ ತನ್ನ ನಾಲ್ಕನೇ ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡದ ವಿರುದ್ಧ ಕೆಟ್ಟ ಸೋಲು ಕಂಡಿದೆ. ಡಿಫೆಂಡಿಂಗ್‌ನಲ್ಲಿ ಅತ್ಯಂತ ನಿರಾಶಾದಾಯಕವಾಗಿ ಆಟವಾಡಿದ ಬೆಂಗಳೂರು ಬುಲ್ಸ್‌ ಲೀಗ್‌ನಲ್ಲಿ ಸತತ 2ನೇ ಸೋಲು ಕಂಡಿತು. ಪಂದ್ಯದಲ್ಲಿ ಯುಪಿ ಯೋಧಾಸ್‌ ತಂಡ ಮೂರು ಬಾರಿ ಬೆಂಗಳೂರು ತಂಡವನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾದರೆ, ಬೆಂಗಳೂರು ಬುಲ್ಸ್‌ ಒಮ್ಮೆ ಮಾತ್ರ ಒಮ್ಮೆ ಆಲೌಟ್‌ ಮಾಡಿತು. ಯುಪಿ ಯೋಧಾಸ್‌ ತಂಡದ ಪರವಾಗಿ ಪ್ರದೀಪ್‌ ನರ್ವಾಲ್‌ ಹಾಗೂ ಸುರೇಂದರ್‌ ಗಿಲ್‌ ಇಬ್ಬರೂ ತಲಾ 14 ಅಂಕಗಳಿಸುವ ಮೂಲಕ ಪಾರಮ್ಯ ಸಾಧಿಸಿದ್ದರಿಂದ ಬೆಂಗಳೂರು ಬುಲ್ಸ್‌ ತಂಡ 37-44 ಅಂಕಗಳಿಂದ ಯುಪಿ ಯೋಧಾಸ್‌ ತಂಡಕ್ಕೆ ಸಂಪೂರ್ಣವಾಗಿ ಶರಣಾಯಿತು. ಮೊದಲ ಅವಧಿಯ ಆಟದಲ್ಲಿಯೇ ಭರ್ಜರಿ ಮುನ್ನಡೆ ಕಂಡುಕೊಂಡಿದ್ದ ಯುಪಿ ಯೋಧಾಸ್‌ ತಂಡ 26-12ರ ಮುನ್ನಡೆಯಲ್ಲಿತ್ತು. 2ನೇ ಅವಧಿಯ ಆಟದಲ್ಲೂ ಇದೇ ಅಂತರವನ್ನು ಕಾಯ್ದುಕೊಳ್ಳುತ್ತಲೇ ಗೆಲುವು ಕಂಡಿತು. ಬೆಂಗಳೂರು ಬುಲ್ಸ್‌ ತಂಡ ಕಳೆದ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಸೋಲು ಕಂಡಿತ್ತು.

ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್‌ ಪರ ವಿಕಾಶ್‌ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು. ಆದರೆ ಈ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್‌ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ದ್ವಿತಿಯಾರ್ಧದ ಕೊನೆಯಲ್ಲಿ ಯುಪಿ ಯೋಧಾಸ್‌ ಪಡೆಯನ್ನು ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪ್ರಥಮಾರ್ಧದಲ್ಲಿ ಬೆಂಗಳೂರು ಎರಡು ಬಾರಿ ಆಲೌಟ್‌ ಆದದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಪ್ರದೀಪ್‌ ನರ್ವಾಲ್‌ 21 ರೈಡಿಂಗ್‌ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್‌ ಕೇವಲ 18 ರೈಡಿಂಗ್‌ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಬೆಂಗಳೂರು ಬುಲ್ಸ್‌ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್‌ ಪರ ವಿಕಾಶ್‌ ಕಂಡೋಲ (12) ಹಾಗೂ ಭರತ್‌ (9) ರೈಡಿಂಗ್‌ ಅಂಕಗಳನ್ನು ಗಳಿಸಿದರು.

ಕಂಬಳವಲ್ಲ.. ಕಬಡ್ಡಿ ಕೋರ್ಟ್‌ನಲ್ಲಿ ಕಾಂತಾರ ಟೀಮ್‌, ಬುಲ್ಸ್‌ಗೆ ಬೆಂಬಲಿಸಿದ ರಿಷಬ್ ಶೆಟ್ಟಿ!

ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೇರಿ ಪಲ್ಟನ್‌: ಅತ್ಯಂತ ರೋಚಕವಾಗಿ ನಡೆದ ದಿನದ ಮೊದಲ ಪಂದ್ಯದಲ್ಲಿ ಯು ಮುಂಬಾ (U Mumba) ವಿರುದ್ಧ 30-28 ಅಂತರದಲ್ಲಿ ಜಯ ಗಳಿಸಿದ ಪುಣೇರಿ ಪಲ್ಟನ್‌ (Puneri Paltan) ತಂಡ ಪ್ರೋ ಕಬಡ್ಡಿ ಲೀಗ್‌ (Pro Kabaddi) ಸೂಪರ್‌ ಸಂಡೆ ಮಹಾರಾಷ್ಟ್ರ ಡರ್ಬಿ  (Bengaluru Bulls)ಗೆದ್ದುಕೊಂಡಿದೆ. ಅಸ್ಲಾಮ್‌ ಇನಾಂದಾರ್‌ (9), ಮೋಹಿತ್‌ ಗೋಯತ್‌ (5) ರೈಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದರೆ, ಟ್ಯಾಕಲ್‌ನಲ್ಲಿ ನಾಯಕ ಫಜಲ್‌ ಅಚ್ರತಲಿ 4 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು. ಮೊಹಮ್ಮದ್‌ ನಬೀಭಾಕ್ಷ್‌ ರೈಡಿಂಗ್‌ನಲ್ಲಿ ಗಳಿಸಿ 4 ಅಂಕ ಜಯದಲ್ಲಿ ಪ್ರಮುಖ ಪಾತ್ರವಹಿಸಿತು. ಇದರೊಂದಿಗೆ ಪುಣೇರಿ ಪಲ್ಟಲ್‌ ಋತುವಿನ ಮೊದಲ ಜಯ ದಾಖಲಿಸಿತು. ಯು ಮುಂಬಾ ಹಿಂದಿನ ಪಂದ್ಯಗಳಿಗಿಂತ ಈ ಪಂದ್ಯದಲ್ಲಿ ಉತ್ತಮವಾಗಿಯೇ ಪ್ರದರ್ಶನ ತೋರಿತು. ಗುಮಾನ್‌ ಸಿಂಗ್‌ (7) ಹಾಗೂ ಜೈ ಭಗವಾನ್‌ (5) ಉತ್ತಮವಾಗಿಯೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದರು. ಆದರೆ ದ್ವಿತಿಯಾರ್ಧದಲ್ಲಿ ಅಂತಿಮ ಹಂತದಲ್ಲಿ ಪುಣೇರಿ ಪಲ್ಟನ್‌ ಗಳಿಸಿದ ರೈಡಿಂಗ್‌ ಅಂಕ ಪಂದ್ಯದ ಫಲಿತಾಂಶವನ್ನು ನಿರ್ಧರಿಸಿತು. ಯು ಮುಂಬಾ ಆಡಿದ ನಾಲ್ಕು ಪಂದ್ಯಗಳಲ್ಲಿ 2 ಜಯ ಹಾಗೂ 2 ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲುಳಿಯಿತು.

ಗೆಲುವಿನ ಓಟ ಮುಂದುವರಿಸಿದ ಡೆಲ್ಲಿ, ಪ್ಯಾಂಥರ್ಸ್ ಹಾಗೂ ಬೆಂಗಾಲ್ ತಂಡಕ್ಕೂ ಸ್ವೀಟ್ ಜೆಲ್ಲಿ!

ಭಾರತದ ಸಿನಿಮಾ ರಂಗದಲ್ಲಿ ಹೊಸ ಕ್ರಾಂತಿ ಉಂಟು ಮಾಡಿದ ಕನ್ನಡ ಸಿನಿಮಾ ಕಾಂತಾರದ ನಿರ್ದೇಶಕ, ನಾಯಕ ನಟ ರಿಶಬ್‌ ಶೆಟ್ಟಿ ಅವರು ಪಂದ್ಯ ಆರಂಭಕ್ಕೆ ಮುನ್ನ ರಾಷ್ಟ್ರ ಗೀತೆಯನ್ನು ಹಾಡಿದ್ದು ಇಂದಿನ ಪಂದ್ಯದ ವಿಶೇಷವಾಗಿತ್ತು. ರಿಶಬ್‌ ಶೆಟ್ಟಿ ಅವರು ಪಂದ್ಯ ವೀಕ್ಷಿಸಿ ಕಬಡ್ಡಿ ಅಭಿಮಾನಿಗಳಲ್ಲಿ ಹೊಸ ಉಲ್ಲಾಸ ತುಂಬಿದರು.

Latest Videos
Follow Us:
Download App:
  • android
  • ios