PKL7: ತವರಿನಲ್ಲಿ ಅಬ್ಬರಿಸಲು ರೆಡಿ ಎಂದ ಶೆರಾವತ್!

ಬೆಂಗಳೂರು ಬುಲ್ಸ್ ತವರಿನ ಚರಣದ ಪಂದ್ಯಕ್ಕೆ ರೆಡಿಯಾಗಿದೆ. ತಂಡದ ಸ್ಟಾರ್ ಪಟುಗಳಾದಗ ರೈಡರ್ ಪವನ್ ಶೆರಾವತ್ ಹಾಗೂ ಡಿಫೆಂಡರ್ ಮಹೇಂದರ್ ಸಿಂಗ್   ಸುವರ್ಣನ್ಯೂಸ್.ಕಾಂ ಜೊತೆ ತಮ್ಮ ತಯಾರಿ ಹಾಗೂ ಗೇಮ್ ಪ್ಲಾನ್ ಕುರಿತು ಮಾಹಿತಿ ಹಂಚಿಕೊಂಡರು.

Pro kabaddi Pawan sherawat mahender singh ready to take home leg challenges

ಬೆಂಗಳೂರು(ಆ.30): ಪ್ರೊ ಕಬಡ್ಡಿ ಲೀಗ್ ಟೂರ್ನಿ ಬೆಂಗಳೂರು ಚರಣಕ್ಕೆ ತವರಿನ ಬೆಂಗಳೂರು ಬುಲ್ಸ್ ಸಜ್ಜಾಗಿದೆ. ತಂಡದ ಯುವ ಕಬಡ್ಡಿ ಪಟುಗಳು ತವರಿನ ಅಭಿಮಾನಿಗಳ ಮುಂದೆ ಆಡಲು ಉತ್ಸುಕರಾಗಿದ್ದಾರೆ. ಅದರಲ್ಲೂ ತಂಡದ ಸ್ಟಾರ್ ರೈಡರ್ ಪವನ್ ಕುಮಾರ್ ಶೆರಾವತ್ ಹಾಗೂ ಡಿಫೆಂಡರ್ ಮಹೇಂದರ್ ಸಿಂಗ್, ತವರಿನ ಚರಣದಲ್ಲಿ ಎದುರಾಳಿಗೆ ಶಾಕ್ ನೀಡೋ ವಿಶ್ವಾಸದಲ್ಲಿದ್ದಾರೆ. ಯುವ ಕಬಡ್ಡಿಪಟುಗಳು ತಮ್ಮ ತಯಾರಿ ಕುರಿತು ಸುವರ್ಣನ್ಯೂಸ್.ಕಾಂ ಜೊತೆ ಹಂಚಿಕೊಂಡರು.

ಇದನ್ನೂ ಓದಿ: PKL7: ಬೆಂಗ್ಳೂರಿಗೆ ಬಂತು ಕಬಡ್ಡಿ; ಕನ್ನಡದಲ್ಲೇ ರೋಹಿತ್ ಆಹ್ವಾನ!

ಕಳೆದೆರಡು ಆವೃತ್ತಿಗಳಲ್ಲಿ ಬುಲ್ಸ್ ಇತರ ತಾಣಗಳನ್ನು ತವರನ್ನಾಗಿ ಮಾಡಿತು. ಆದರೆ ನಮಗೆ ಅಭಿಮಾನಿಗಳ ಬೆಂಬಲ ಸಿಗುತ್ತಿರಲಿಲ್ಲ. ಈ ಬಾರಿ ತವರಿನ ಅಭಿಮಾನಿಗಳ ಎದುರೇ ನಾವು ಕಣಕ್ಕಿಳಿಯುತ್ತಿದ್ದೇವೆ. ಇದು ಹೆಚ್ಚಿನ ಖುಷಿ ನೀಡುತ್ತಿದೆ ಎಂದು ರೈಡರ್ ಪವನ್ ಶೆರಾವತ್ ಹೇಳಿದರು. 

"

ಎಲ್ಲಾ ರೈಡರ್‌ಗಳನ್ನು ಟ್ಯಾಕಲ್ ಮಾಡುವುದು ಸವಾಲು. ಆದರೆ ಬೆಂಗಳೂರು ಬುಲ್ಸ್ ತಂಡದ ಕೋಚ್, ನಾಯಕ, ಫ್ರಾಂಚೈಸಿ ಮಾಲೀಕರು ತುಂಬಾ ಬೆಂಬಲ ನೀಡಿದ್ದಾರೆ. ಹೆಜ್ಜೆ ಹೆಜ್ಜೆಗೂ ಮಾರ್ಗದರ್ಶನ ನೀಡಿದ್ದಾರೆ. ಇದು ನನಗೆ ಸಹಕಾರಿಯಾಗಿದೆ. ಈ ಮೂಲಕ ಈ ಚರಣದಲ್ಲಿ ಉತ್ತಮ ಹೋರಾಟ ನೀಡಲಿದ್ದೇನೆ ಎಂದು ಡಿಫೆಂಡರ್ ಮಹೇಂದರ್ ಹೇಳಿದರು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಮಹಿಂದರ್ ಹಾಗೂ ಪವನ್ ಶೆರವಾತ್ ಬೆಂಗಳೂರು ಬುಲ್ಸ್‌ಗೆ ಬೆಂಬಲ ಸೂಚಿಸಿಲು ಕನ್ನಡದಲ್ಲೇ ಮನವಿ ಮಾಡಿದರು. ಪ್ರತಿ ಪಂದ್ಯದಲ್ಲೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿದ್ದೇವೆ ಎಂದರು.

Latest Videos
Follow Us:
Download App:
  • android
  • ios