ಪುಣೆ(ಏ.08): ಕಳೆದ ಪ್ರೊ ಕಬಡ್ಡಿ ಆವೃತ್ತಿಯಲ್ಲಿ ಆಟಗಾರರಾಗಿ ಕಾಣಿಸಿಕೊಂಡ ಕಬಡ್ಡಿ ಪಟುಗಳು ಇದೀಗ ಕೋಚ್‌ಗಳಾಗಿ ಕಣಕ್ಕಿಳಿಯುತ್ತಿದ್ದಾರೆ. 7ನೇ ಆವೃತ್ತಿಯ ಪ್ರೊ ಕಬಡ್ಡಿಯಲ್ಲಿ ಭಾರತದ ಮಾಜಿ ನಾಯಕರಾದ ಅನೂಪ್‌ ಕುಮಾರ್‌ ಹಾಗೂ ರಾಕೇಶ್‌ ಕುಮಾರ್‌ ಕೋಚ್‌ಗಳಾಗಿ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ: ಪ್ರೊ ಕಬಡ್ಡಿ ಹರಾಜು - 441 ಆಟಗಾರರ ಅದೃಷ್ಟ ಪರೀಕ್ಷೆ!

ಅನೂಪ್‌ ಪುಣೇರಿ ಪಲ್ಟನ್‌ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರೆ, ರಾಕೇಶ್‌ ಹರ್ಯಾಣ ಸ್ಟೀಲ​ರ್‍ಸ್ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಅನೂಪ್‌ ಕಳೆದ ಆವೃತ್ತಿ ವೇಳೆ ಕಬಡ್ಡಿಗೆ ವಿದಾಯ ಘೋಷಿಸಿದ್ದರು. ರಾಕೇಶ್‌ ಕಳೆದ ಆವೃತ್ತಿಯಲ್ಲಿ ಪ್ರಸಾರ ಹಕ್ಕು ಹೊಂದಿರುವ ವಾಹಿನಿಯಲ್ಲಿ ವಿಶ್ಲೇಷಕರಾಗಿ ಕೆಲಸ ಮಾಡಿದ್ದರು. ಇದೇ ಮೊದಲ ಬಾರಿಗೆ ಇವರಿಬ್ಬರು ಕೋಚ್‌ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.