11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪರ್ದೀಪ್ ನರ್ವಾಲ್, ಬೆಂಗಳೂರು ಬುಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು ಪರ್ದೀಪ್‌ ನರ್ವಾಲ್‌ ಮುನ್ನಡೆಸಲಿದ್ದಾರೆ. ಪರ್ದೀಪ್‌ 2015ರಲ್ಲಿ ಬೆಂಗಳೂರು ಪರ ಆಡುವ ಮೂಲಕ ಪ್ರೊ ಕಬಡ್ಡಿ ಅಭಿಯಾನ ಆರಂಭಿಸಿದ್ದರು. ಬಳಿಕ ಪಾಟ್ನಾ ಪೈರೇಟ್ಸ್‌ ಹಾಗೂ ಯುಪಿ ಯೋಧಾಸ್‌ ತಂಡಗಳನ್ನು ಪ್ರತಿನಿಧಿಸಿದ್ದರು. 

ಇತ್ತೀಚೆಗೆ ನಡೆದ ಹರಾಜಿನಲ್ಲಿ ಪರ್ದೀಪ್‌ಗೆ 70 ಲಕ್ಷ ರು. ನೀಡಿ ಬುಲ್ಸ್‌ ತನ್ನ ತೆಕ್ಕೆಗೆ ಪಡೆದುಕೊಂಡಿತ್ತು. ಪರ್ದೀಪ್‌ ಪ್ರೊ ಕಬಡ್ಡಿಯಲ್ಲಿ 170 ಪಂದ್ಯಗಳನ್ನಾಡಿದ್ದು, ಅತ್ಯಂತ ಯಶಸ್ವಿ ರೈಡರ್‌ ಎನಿಸಿಕೊಂಡಿದ್ದಾರೆ. ಅವರು 1690 ರೈಡ್‌ ಅಂಕಗಳನ್ನು ಸಂಪಾದಿಸಿದ್ದಾರೆ.

ಬಹುನಿರೀಕ್ಷಿತ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಅಕ್ಟೋಬರ್ 18ರಿಂದ ಹೈದರಾಬಾದ್‌ನ ಗಚ್ಚಿಬೌಲಿ ಒಳಾಂಗಣ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟಾನ್ಸ್‌ ತಂಡವು ಬೆಂಗಳೂರು ಬುಲ್ಸ್‌ ತಂಡವನ್ನು ಎದುರಿಸಲಿದೆ.

ಅನರ್ಹತೆ ಬೆನ್ನಲ್ಲೇ ಪ್ರಧಾನಿ ಮೋದಿ ಮಾಡಿದ ಕರೆ ಸ್ವೀಕರಿಸದ ವಿನೇಶ್; ನನಗೆ ಅದು ಇಷ್ಟವಿರಲಿಲ್ಲ ಅಂದಿದ್ದೇಕೆ ಫೋಗಟ್?

ಬಿಎಫ್‌ಸಿ-ಮುಂಬೈ ಗೋಲುರಹಿತ ಡ್ರಾ

ಮುಂಬೈ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಹಾಗೂ ಹಾಲಿ ಚಾಂಪಿಯನ್‌ ಮುಂಬೈ ಎಫ್‌ಸಿ ನಡುವಿನ ಬುಧವಾರದ ಪಂದ್ಯ ಗೋಲುರಹಿತ ಡ್ರಾಗೊಂಡಿತು. ಆರಂಭಿಕ ಮೂರೂ ಪಂದ್ಯಗಳಲ್ಲಿ ಗೆದ್ದಿದ್ದ ಬಿಎಫ್‌ಸಿ, ಮುಂಬೈ ವಿರುದ್ಧದ ಡ್ರಾದ ಹೊರತಾಗಿಯೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. 

ತಂಡ 4 ಪಂದ್ಯಗಳಲ್ಲಿ ಒಟ್ಟು 10 ಅಂಕ ಕಲೆಹಾಕಿದೆ. ಅತ್ತ ಮುಂಬೈ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಡ್ರಾ ಹಾಗೂ 1 ಸೋಲಿನೊಂದಿಗೆ ಕೇವಲ 2 ಅಂಕ ಗಳಿಸಿದ್ದು, ಪಟ್ಟಿಯಲ್ಲಿ 11ನೇ ಸ್ಥಾನದಲ್ಲೇ ಬಾಕಿಯಾಗಿದೆ. ಸುನಿಲ್‌ ಚೆಟ್ಟಿ ನಾಯಕತ್ವದ ಬಿಎಫ್‌ಸಿ ಮುಂದಿನ ಪಂದ್ಯದಲ್ಲಿ ಅ.18ರಂದು ಪಂಜಾಬ್‌ ಎಫ್‌ಸಿ ವಿರುದ್ಧ ಸೆಣಸಲಿದೆ. ಪಂದ್ಯಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಅಶ್ವಿನ್ ಹಿಂದಿಕ್ಕಿ ಮತ್ತೆ ನಂ.1 ಸ್ಥಾನಕ್ಕೇರಿದ ಜಸ್ಪ್ರೀತ್ ಬುಮ್ರಾ; ಹೊಸ ಎತ್ತರಕ್ಕೇರಿದ ಯಶಸ್ವಿ ಜೈಸ್ವಾಲ್!

ಸಂತೋಷ್‌ ಟ್ರೋಫಿಗೆ ಹೈದರಾಬಾದ್‌ ಆತಿಥ್ಯ

ನವದೆಹಲಿ: 78ನೇ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿಯ ಕೊನೆ ಸುತ್ತಿನ ಪಂದ್ಯಗಳಿಗೆ ಹೈದರಾಬಾದ್‌ ಆತಿಥ್ಯ ವಹಿಸಲಿದೆ ಎಂದು ಭಾರತೀಯ ಫುಟ್ಬಾಲ್‌ ಫೆಡರೇಷನ್ ಬುಧವಾರ ಮಾಹಿತಿ ನೀಡಿದೆ. ತಾತ್ಕಾಲಿ ವೇಳಾಪಟ್ಟಿ ಪ್ರಕಾರ ಪಂದ್ಯಗಳು ಡಿಸೆಂಬರ್‌ ಮೊದಲ ವಾರ ಆರಂಭಗೊಳ್ಳಲಿವೆ. ಮಾಜಿ ಚಾಂಪಿಯನ್‌ ಕರ್ನಾಟಕ ‘ಜಿ’ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.