ಹರ್ಯಾಣಕ್ಕೆ ಚೊಚ್ಚಲ ಪ್ರೊ ಕಬಡ್ಡಿ ಕಿರೀಟ!
ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ತಂಡವು ಪಾಟ್ನಾ ಪೈರೇಟ್ಸ್ ತಂಡವನ್ನು 32-23 ಅಂಕಗಳಿಂದ ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಹರ್ಯಾಣ ತಂಡವು ಫೈನಲ್‌ನಲ್ಲೂ ಅದೇ ಲಯವನ್ನು ಮುಂದುವರೆಸಿ ಜಯ ಸಾಧಿಸಿತು.
ಪುಣೆ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹರ್ಯಾಣ ಸ್ಟೀಲರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಪಾಟ್ನಾ ಪೈರೇಟ್ಸ್ ವಿರುದ್ಧ ಫೈನಲ್‌ನಲ್ಲಿ ಹರ್ಯಾಣ 32-23 ಅಂಕಗಳಿಂದ ಗೆದ್ದು, ಚೊಚ್ಚಲ ಕಿರೀಟ ತನ್ನದಾಗಿಸಿಕೊಂಡಿತು. 4ನೇ ಬಾರಿ ಟ್ರೋಫಿ ಗೆಲ್ಲುವ ಪಾಟ್ನಾ ಪೈರೇಟ್ಸ್ ಕನಸು ಭಗ್ನಗೊಂಡಿತು. ಕಳೆದ ಬಾರಿ ಫೈನಲ್‌ನಲ್ಲಿ ಸೋತಿದ್ದ ಹರ್ಯಾಣ ಈ ಬಾರಿ ಆ ತಪ್ಪು ಮಾಡಲಿಲ್ಲ.
ಟೂರ್ನಿಯುದ್ದಕ್ಕೂ ಅಭೂತಪೂರ್ವ ಪ್ರದರ್ಶನ ತೋರಿದ್ದ ಹರ್ಯಾಣ, ಫೈನಲ್‌ನಲ್ಲೂ ಎದುರಾಳಿ ಮೇಲೆ ಸವಾರಿ ಮಾಡಿತು. ಆರಂಭದಲ್ಲಿ ಇತ್ತಂಡಗಳಿಂದ ತೀವ್ರ ಪೈಪೋಟಿ ಕಂಡುಬಂದರೂ, ಬಳಿಕ ಹರ್ಯಾಣ ಪಂದ್ಯದ ಮೇಲೆ ಹಿಡಿತ ಸಾಧಿಸಿತು.
When 𝐂𝐡𝐚𝐦𝐩𝐢𝐨𝐧𝐬 cross paths... 🤝#ProKabaddi #PKL11 #LetsKabaddi #ProKabaddiOnStar #PKLFinal #HaryanaSteelers #PatnaPirates pic.twitter.com/AxJLcnSvfx
— ProKabaddi (@ProKabaddi) December 29, 2024
ಮೊದಲಾರ್ಧದಲ್ಲಿ 15-12 ಅಂಕಗಳಿಂದ ಮುನ್ನಡೆಯಲ್ಲಿದ್ದ ಹರ್ಯಾಣ, ಕೊನೆಯಲ್ಲಿ ಮತ್ತಷ್ಟು ಅಂಕ ಗಳಿಸಿತು. 2ನೇ ಅವಧಿಯಲ್ಲಿ ಆಲೌಟ್ ಜೊತೆ 17 ಅಂಕ ದೋಚಿದ ಹರ್ಯಾಣ ಅರ್ಹವಾಗಿಯೇ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಹರ್ಯಾಣ ಪರ ಶಿವಂ 9, ಮೊಹಮದ್‌ರೆಜಾ ಶಾದ್ಲೂ 7, ವಿನಯ್ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 3 ಬಾರಿ ಚಾಂಪಿಯನ್ ಪಾಟ್ನಾ ಪರ ಗುರುದೀಪ್ 6, ದೇವಾಂಕ್ 5 ಅಂಕ ಗಳಿಸಿದರು.
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ
02ನೇ ಬಾರಿ: ಪಾಟ್ನಾ ಪ್ರೊ ಕಬಡ್ಡಿ ಫೈನಲ್‌ನಲ್ಲಿ 2ನೇ ಬಾರಿ ಸೋಲನುಭವಿಸಿತು. 2022ರ ಫೈನಲ್‌ನಲ್ಲೂ ತಂಡ ಸೋತಿತ್ತು.