ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಹಿರಿಯ ವೇಗಿ ಕ್ರಿಸ್ ವೋಕ್ಸ್ ಗಾಯಗೊಂಡಿದ್ದರು, ಅವರ ಬದಲಿಗೆ ಗುಸ್ ಅಟ್ಕಿನ್‌ಶನ್ ತಂಡ ಕೂಡಿಕೊಂಡಿದ್ದರು. ಇದೀಗ ಅಟ್ಕಿನ್‌ಸನ್, ಟಾಮ್ ಹಾರ್ಟ್ಲಿ ಹಾಗೂ ಶೋಯೆಬ್ ಬಷೀರ್ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಲಂಡನ್(ಡಿ.11): ಭಾರತ ಎದುರು ಜನವರಿ 25ರಿಂದ ಆರಂಭವಾಗಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ 16 ಆಟಗಾರರನ್ನೊಳಗೊಂಡ ಇಂಗ್ಲೆಂಡ್ ಟೆಸ್ಟ್ ತಂಡ ಪ್ರಕಟವಾಗಿದ್ದು, ಬೆನ್ ಸ್ಟೋಕ್ಸ್ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಇಂಗ್ಲೆಂಡ್‌ ತಂಡವು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಇಂಗ್ಲೆಂಡ್ ಪ್ರಕಟಿಸಿದ 16 ಆಟಗಾರರ ತಂಡದಲ್ಲಿ ಮೂವರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ.

ಇತ್ತೀಚೆಗಷ್ಟೇ ಭಾರತದಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಹಿರಿಯ ವೇಗಿ ಕ್ರಿಸ್ ವೋಕ್ಸ್ ಗಾಯಗೊಂಡಿದ್ದರು, ಅವರ ಬದಲಿಗೆ ಗುಸ್ ಅಟ್ಕಿನ್‌ಶನ್ ತಂಡ ಕೂಡಿಕೊಂಡಿದ್ದರು. ಇದೀಗ ಅಟ್ಕಿನ್‌ಸನ್, ಟಾಮ್ ಹಾರ್ಟ್ಲಿ ಹಾಗೂ ಶೋಯೆಬ್ ಬಷೀರ್ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜನರು ಈ ಕ್ರಿಕೆಟಿನಲ್ಲಿ ಮುಂದಿನ ಯುವರಾಜ್ ಸಿಂಗ್ ನಿರೀಕ್ಷಿಸುತ್ತಿದ್ದಾರೆ: ಸನ್ನಿ

ಇದೀಗ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ಬೆನ್ ಫೋಕ್ಸ್‌ಗೆ ಮತ್ತೊಮ್ಮೆ ತಂಡದಿಂದ ಬುಲಾವ್ ಬಂದಿದೆ. 2021ರಲ್ಲಿ ಇಂಗ್ಲೆಂಡ್ ತಂಡವು ಭಾರತ ಪ್ರವಾಸ ಕೈಗೊಂಡಿದ್ದಾಗ ಬೆನ್ ಫೋಕ್ಸ್ ಗಮನಾರ್ಹ ಪ್ರದರ್ಶನ ತೋರಿದ್ದರು. ಈ ಕಾರಣಕ್ಕಾಗಿಯೇ ಫೋಕ್ಸ್‌ಗೆ ಮತ್ತೊಮ್ಮೆ ಇಂಗ್ಲೆಂಡ್ ಆಯ್ಕೆ ಸಮಿತಿ ಮಣೆ ಹಾಕಿದೆ. ಟಾಮ್ ಹಾರ್ಡ್ಲಿ ಹಾಗೂ ಶೋಯೆಬ್ ಬಷೀರ್ ಇಬ್ಬರು ಸ್ಪಿನ್ನರ್‌ಗಳಾಗಿದ್ದು, ಭಾರತದಲ್ಲಿನ ಪಿಚ್‌ ಗಮನದಲ್ಲಿಟ್ಟುಕೊಂಡು ಈ ಇಬ್ಬರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. 

Scroll to load tweet…

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಪ್ರಕಟಿಸಿದ 16 ಆಟಗಾರರ ಪಟ್ಟಿಯಲ್ಲಿ ನಾಲ್ವರು ಸ್ಪಿನ್ನರ್‌ಗಳಿಗೆ ಮಣೆ ಹಾಕಲಾಗಿದೆ. ಜಾಕ್ ಲೀಚ್ ಹಾಗೂ ರೆಹಾನ್ ಅಹಮ್ಮದ್ ಮೊದಲ ಆಯ್ಕೆಯ ಸ್ಪಿನ್ನರ್‌ಗಳಾಗಿದ್ದು, ಜೋ ರೂಟ್ ಕೂಡಾ ಹಂಗಾಮಿ ಸ್ಪಿನ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವುದರಿಂದ ಗುಸ್ ಅಟ್ಕಿನ್‌ಸನ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿದ್ದು, ವೇಗಿಗಳ ರೂಪದಲ್ಲಿ ಜೇಮ್ಸ್ ಆಂಡರ್‌ಸನ್, ಮಾರ್ಕ್‌ ವುಡ್ ಹಾಗೂ ಓಲಿ ರಾಬಿನ್‌ಸನ್ ಸ್ಥಾನ ಪಡೆದಿದ್ದಾರೆ.

ಟೀಂ ಇಂಡಿಯಾಗೆ ಎಂಟ್ರಿಕೊಟ್ಟ ವೇಗದಲ್ಲೇ ಮರೆಯಾದ ಯಂಗ್‌ಸ್ಟರ್ಸ್‌ಗಳಿವರು..!

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಜನವರಿ 25ರಿಂದ ಹೈದರಾಬಾದ್‌ನಲ್ಲಿ ಆರಂಭವಾಗಲಿದೆ. ಇನ್ನು ಇದಾದ ಬಳಿಕ ವೈಜಾಗ್, ರಾಜ್‌ಕೋಟ್, ರಾಂಚಿ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಮಾರ್ಚ್‌ 7-11ರ ವರೆಗೆ ಧರ್ಮಶಾಲಾದಲ್ಲಿ ನಡೆಯಲಿದೆ.

ಭಾರತ ಎದುರಿನ ಟೆಸ್ಟ್ ಸರಣಿಗೆ ಇಂಗ್ಲೆಂಡ್ ತಂಡ ಹೀಗಿದೆ ನೋಡಿ:

ಬೆನ್ ಸ್ಟೋಕ್ಸ್(ನಾಯಕ), ರೆಹಾನ್ ಅಹಮ್ಮದ್, ಜೇಮ್ಸ್ ಆಂಡರ್‌ಸನ್, ಗುಸ್ ಅಟ್ಕಿನ್‌ಸನ್, ಜಾನಿ ಬೇರ್‌ಸ್ಟೋವ್, ಶೋಯೆಬ್ ಬಷೀರ್, ಹ್ಯಾರಿ ಬ್ರೂಕ್‌, ಜಾಕ್ ಕ್ರಾವ್ಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜಾಕ್ ಲೀಚ್, ಓಲಿ ಪಾಪ್, ಓಲಿ ರಾಬಿನ್‌ಸನ್, ಜೋ ರೂಟ್, ಮಾರ್ಕ್ ವುಡ್‌.