ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಪುಣೆ ಅಂಕಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಹೆಚ್ಚಿನ ಬೋನಸ್‌ ಅಂಕಗಳನ್ನು ಬಿಟ್ಟುಕೊಟ್ಟಿದ್ದು ಮತ್ತು ತಾರಾ ರೈಡರ್‌ಗಳು ವಿಫಲವಾಗಿದ್ದು ಬುಲ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು.

ನವದೆಹಲಿ: 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಪ್‌ಗೇರುವ ನಿರೀಕ್ಷೆಯಲ್ಲಿರುವ ಮಾಜಿ ಚಾಂಪಿಯನ್‌ ಬೆಂಗಳೂರಿಗೆ ಮತ್ತೆ ಹಿನ್ನಡೆಯುಂಟಾಗಿದೆ. ಟೂರ್ನಿಯ 8ನೇ ಗೆಲುವಿನ ಕನಸಿಗೆ ಬುಧವಾರ ಪುಣೇರಿ ಪಲ್ಟನ್‌ ತಣ್ಣೀರೆರಚಿತು. ಬುಲ್ಸ್ ಗೂಳಿಗಳ ಆರ್ಭಟ ಮೆಟ್ಟಿನಿಂದ ಪುಣೆ 40-31 ಅಂಕಗಳಲ್ಲಿ ಜಯಗಳಿಸಿತು. ಬುಲ್ಸ್ 19 ಪಂದ್ಯಗಳಲ್ಲಿ 10ನೇ ಸೋಲು ಕಂಡರೆ, ಈಗಾಗಲೇ ಪ್ಲೇ-ಆಫ್‌ಗೇರಿದ್ದ ಪುಣೇರಿ 18ರಲ್ಲಿ 13 ಜಯದೊಂದಿಗೆ ಮತ್ತೆ ಅಗ್ರಸ್ಥಾನಕ್ಕೇರಿತು. ಈ ಸೋಲು ಬೆಂಗಳೂರು ಬುಲ್ಸ್ ತಂಡದ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.

ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಪುಣೆ ಅಂಕಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಹೆಚ್ಚಿನ ಬೋನಸ್‌ ಅಂಕಗಳನ್ನು ಬಿಟ್ಟುಕೊಟ್ಟಿದ್ದು ಮತ್ತು ತಾರಾ ರೈಡರ್‌ಗಳು ವಿಫಲವಾಗಿದ್ದು ಬುಲ್ಸ್‌ ಸೋಲಿಗೆ ಪ್ರಮುಖ ಕಾರಣವಾಯಿತು. ಬುಲ್ಸ್‌ ಪರ ಸುಶೀಲ್‌ 9 ರೈಡ್‌ ಅಂಕ ಗಳಿಸಿದರೆ, ಪರ್ತೀಕ್‌ 6, ರಾಣ್‌ ಸಿಂಗ್‌ ಹಾಗೂ ಸೌರಭ್‌ ತಲಾ ಟ್ಯಾಕಲ್‌ ಅಂಕ ಸಂಪಾದಿಸಿದರು. ಪುಣೆಯ ಅಸ್ಲಮ್‌ ಇನಾಮ್ದಾರ್‌ 11, ಆಕಾಶ್‌ ಶಿಂಧೆ 9, ಮೋಹಿತ್‌ ಗೊಯತ್‌ 7 ಅಂಕ ಪಡೆದು ಪುಣೆ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಮುಂಬೈ ಇಂಡಿಯನ್ಸ್ ಕೋಚ್‌ ಮಾರ್ಕ್ ಬೌಷರ್‌ ವಿರುದ್ಧ ರೋಹಿತ್ ಶರ್ಮಾ ಪತ್ನಿ ಕೆಂಡ..!

ಮತ್ತೊಂದು ಪಂದ್ಯದಲ್ಲಿ, ಪ್ಲೇ-ಆಫ್‌ಗೇರುವ ತವಕದಲ್ಲಿದ್ದ ದಬಾಂಗ್‌ ಡೆಲ್ಲಿಗೆ ಶಾಕ್‌ ನೀಡಿದ ಜೈಪುರ ಪಿಂಕ್‌ ಪ್ಯಾಂಥರ್ಸ್‌ 27-22ರಿಂದ ಜಯ ಗಳಿಸಿತು.

Scroll to load tweet…

ಬೆಂಗ್ಳೂರು ಓಪನ್‌ ಟೆನಿಸ್‌: ಅಗ್ರ ಆಟಗಾರರು ಕಣಕ್ಕೆ

‌ಬೆಂಗಳೂರು: ಪಾಕಿಸ್ತಾನದ ವಿರುದ್ಧ ಡೇವಿಸ್‌ ಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತ ರಾಮ್‌ಕುಮಾರ್ ರಾಮನಾಥನ್, ಶ್ರೀರಾಮ್ ಬಾಲಾಜಿ ಸೇರಿದಂತೆ ನಾಲ್ವರು ಆಟಗಾರರು ಈ ಬಾರಿ ಬೆಂಗಳೂರು ಓಪನ್ ಟೆನಿಸ್‌ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಸಿಂಗಲ್ಸ್‌ನಲ್ಲಿ ಸುಮಿತ್ ನಗಾಲ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.

ಫೆ.12ರಿಂದ 18 ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ರಾಮ್‌ಕುಮಾರ್‌ಗೆ ಸಾಕೇತ್ ಮೈನೇನಿ ಜೋಡಿಯಾದರೆ, ಬಾಲಾಜಿಗೆ ಜರ್ಮನಿಯ ಆ್ಯಂಡ್ರೆ ಬೆಗೆಮನ್ ಜತೆಯಾಗಲಿದ್ದಾರೆ. ರಾಮ್‌ಕುಮಾರ್ ಮತ್ತು ಮೈನೇನಿ 2022ರಲ್ಲಿ ಡಬಲ್ಸ್ ಪ್ರಶಸ್ತಿ ಗೆದ್ದಿದ್ದರು.