12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ನಾಕೌಟ್ ಮತ್ತು ಫೈನಲ್ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಅಕ್ಟೋಬರ್ 26ರಿಂದ ನವದೆಹಲಿಯಲ್ಲಿ ಪ್ಲೇ-ಆಫ್ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 31ರಂದು ಫೈನಲ್ ನಡೆಯಲಿದೆ.
ನವದೆಹಲಿ: 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ನಾಕೌಟ್, ಫೈನಲ್ ಪಂದ್ಯದ ವೇಳಾಪಟ್ಟಿ ಪ್ರಕಟಗೊಂಡಿದೆ. ಲೀಗ್ ಹಂತದ ಪಂದ್ಯ ಆಯೋಜನೆಯಿಂದ ವಂಚಿತಗೊಂಡಿದ್ದ ಬೆಂಗಳೂರಿನಲ್ಲಿ ಪ್ಲೇ-ಆಫ್ ಕೂಡಾ ನಡೆಯುವುದಿಲ್ಲ. ಈ ಪಂದ್ಯಗಳಿಗೆ ನವದೆಹಲಿ ಆತಿಥ್ಯ ವಹಿಸಲಿದೆ.
ಅಕ್ಟೋಬರ್ 23ರಂದು ಲೀಗ್ ಹಂತದ ಪಂದ್ಯಗಳು ಕೊನೆಗೊಳ್ಳಲಿವೆ. ಬಳಿಕ ಅಕ್ಟೋಬರ್ 25ರಂದು ಪ್ಲೇ-ಇನ್ ಪಂದ್ಯಗಳು ನಡೆಯಲಿದ್ದು, 5ರಿಂದ 8 ಸ್ಥಾನ ಪಡೆದ ತಂಡಗಳು ಆಡಲಿವೆ. ಅಕ್ಟೋಬರ್ 26ರಿಂದ ಪ್ಲೇ-ಆಫ್ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿವೆ. ಅಕ್ಟೋಬರ್ 31ರಂದು ಫೈನಲ್ ಪಂದ್ಯ ನಿಗದಿಯಾಗಿದೆ.
ಕಬಡ್ಡಿ: ಯು ಮುಂಬಾ, ದಬಾಂಗ್ ಡೆಲ್ಲಿಗೆ ಗೆಲುವು
ಚೆನ್ನೈ: ಪ್ರೊ ಕಬಡ್ಡಿಯಲ್ಲಿ ಶುಕ್ರವಾರ ಗುಜರಾತ್ ವಿರುದ್ಧ ದಬಾಂಗ್ ಡೆಲ್ಲಿ 39-33 ಅಂಕಗಳಿಂದ ಜಯ ಗಳಿಸಿತು. ತಂಡಕ್ಕಿದು 12ನೇ ಗೆಲುವು. ಈ ಗೆಲುವಿನೊಂದಿಗೆ ದಬಾಂಗ್ ಡೆಲ್ಲಿ ತಂಡವು 24 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿಯೇ ಭದ್ರವಾಗಿದೆ. 14 ಪಂದ್ಯವನ್ನಾಡಿರುವ ದಬಾಂಗ್ ಡೆಲ್ಲಿ ಇದುವರೆಗೂ ಕೇವಲ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ.
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ದ ಯು ಮುಂಬಾ 48 -29 ಅಂಕಗಳಲ್ಲಿ ಜಯಭೇರಿ ಬಾರಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ತಂಡವನ್ನು ಹಿಂದಿಕ್ಕಿ ಯು ಮುಂಬಾ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಸದ್ಯ ಯು ಮುಂಬಾ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೇ, ಬೆಂಗಳೂರು ಬುಲ್ಸ್ ತಂಡವು 12 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ಜಾರಿದೆ.
ಬಿಡಬ್ಲ್ಯುಎಫ್ ಅಥೀಟ್ಸ್ ಆಯೋಗಕ್ಕೆ ಸಿಂಧು ಆಯ್ಕೆ
ನವದೆಹಲಿ: ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ತನ್ನ ಅಥ್ಲೆಟ್‌ಗಳ ಆಯೋಗಕ್ಕೆ 2026-2029 ಅವಧಿಗೆ ಹೊಸ ಸದಸ್ಯರ ಪಟ್ಟಿ ಪ್ರಕಟಿಸಿದೆ. ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸತತ 3ನೇ ಬಾರಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿಂಧು 2017 ರಿಂದ 2025 ತನಕ ಆಯೋಗದ ಸದಸ್ಯರಾಗಿದ್ದರು.
2020ರಿಂದ ಫೆಡರೇಶನ್‌ನ ರಾಯಭಾರಿಯಾಗಿದ್ದಾರೆ. ಈಗ 2026ರ ನವೆಂಬರ್‌ನಿಂದ 2029ರ ನವೆಂಬರ್ ವರೆಗೆ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಆರ್ಕ್‌ಟಿಕ್ ಬ್ಯಾಡ್ಮಿಂಟನ್: ಅನ್ಮೋಲ್ ಸೆಮಿಫೈನಲ್‌ಗೆ ಲಗ್ಗೆ
ವಂಟಾ(ಫಿನ್ಸೆಂಡ್): ಆರ್ಕಟಿಕ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಶಟ್ಲರ್ ಅನ್ಮೋಲ್ ಖಾರ್ಬ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ ಕಾರ್ಟರ್ ಫೈನಲ್‌ನಲ್ಲಿ 18 ವರ್ಷದ ಅನ್ಮೋಲ್, ಡೆನ್ಮಾರ್ಕ್ ಅಮೇಲಿ ಸ್ಕಲ್ಜ್ ವಿರುದ್ದ 21-15, 21-14 ಗೇಮ್ ಗಳಲ್ಲಿ ಜಯಭೇರಿ ಬಾರಿಸಿ, ಮೊದಲ ಬಾರಿ ಸೂಪರ್ 500 ಟೂರ್ನಿಯಲ್ಲಿ ಅಂತಿಮ 4ರ ಘಟ್ಟ ಪ್ರವೇಶಿಸಿದರು. ಮಿಶ್ರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೋ ಜೋಡಿ ಸೋತು ಹೊರಬಿತ್ತು.
