ಜೈಪುರ(ಸೆ.23): ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ದಿಲ್ಲಿ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಗಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಬುಲ್ಸ್ ಹಾಗೂ ದಿಲ್ಲಿ 39-39 ಅಂಕಗಳಿಸಿ ಪಂದ್ಯವನ್ನು ಟೈ ಮಾಡಿಕೊಂಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

ಪವನ್ ಶೆರವಾತ್ ಟ್ಯಾಕಲ್ ಹಾಗೂ ಅದ್ಭುತ ರೈಡ್ ಮೂಲಕ ಬೆಂಗಳೂರು ಬುಲ್ಸ್ ಪಂದ್ಯ ಆರಂಭಿಸಿತು.  ಮೊದಲ ನಿಮಿಷದಲ್ಲೇ ಬೆಂಗಳೂರು 3-1 ಅಂತರದ ಪಡೆಯಿತು. 6ನೇ ನಿಮಿಷದಲ್ಲಿ ದಿಲ್ಲಿ 7-7 ಅಂಕಗಳ ಮೂಲಕ ಸಮಬಲ ಮಾಡಿಕೊಂಡಿತು. 18ನೇ ನಿಮಿಷದಲ್ಲಿ ಬೆಂಗಳೂರು ಆಲೌಟ್‌ಗೆ ತುತ್ತಾಯಿತು. ಈ ಮೂಲಕ ದಿಲ್ಲಿ 21-17 ಅಂಕಗಳ ಮುನ್ನಡೆ ಪಡೆಯಿತು.

ಮೊದಲಾರ್ಧದಲ್ಲಿ 22-19 ಅಂಕಗಳ ಮುನ್ನಡೆ ಕಾಯ್ದುಕೊಂಡ ದಿಲ್ಲಿ, ದ್ವಿತಿಯಾರ್ಧದಲ್ಲಿ ಮಿಂಚಿನ ಆಟ ಪ್ರದರ್ಶಿಸಿತು. ಹೆಚ್ಚು ತಪ್ಪುಗಳಾಗದಂತೆ ನೋಡಿಕೊಂಡ ದಿಲ್ಲಿ ಮುನ್ನಡೆ ಅಂತರ ಕಾಪಾಡಿತು. ಸೆಕೆಂಡ್ ಹಾಫ್‌ನ 8ನೇ ನಿಮಿಷದಲ್ಲಿ ಮತ್ತೆ ಆಲೌಟ್ ಆದ ಬುಲ್ಸ್, 10 ಅಂಕಗಳ ಹಿನ್ನಡೆ ಅನುಭವಿಸಿತು. 

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಅಂತಿಮ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಬುಲ್ಸ್, ದಿಲ್ಲಿ ತಂಡವನ್ನು ಆಲೌಟ್ ಮಾಡಿತು. ಈ ಮೂಲಕ ಪಂದ್ಯದ ಅಂತ್ಯದ ವೇಳೆ 39-39 ಅಂಕ ಸಂಪಾದಿಸಿ ಸೋಲಿನಿಂದ ಪಾರಾಯಿತು. ರೋಚಕ ಟೈ ಮಾಡಿದ ಬುಲ್ಸ್ ನಿಟ್ಟುಸಿರುಬಿಟ್ಟಿತು.

ಪಾಟ್ನಾ ವಿರುದ್ಧ ಗೆದ್ದ ಹರ್ಯಾಣ;
ಬೆಂಗಳೂರು ಬುಲ್ಸ್ ಪಂದ್ಯಕ್ಕೂ ಮುನ್ನ ಪಾಟ್ನಾ ಪೈರೇಟ್ಸ್ ಹಾಗೂ ಹರ್ಯಾಣ ಸ್ಟೀಲರ್ಸ್ ಮುಖಾಮುಖಿಯಾಗಿತ್ತು. ಈ ಹೋರಾಟದಲ್ಲಿ 39-34 ಅಂತರಗಳಿಂದ ಹರ್ಯಾಣ ಸ್ಟೀಲರ್ಸ್, ಎದುರಾಳಿ ಪಾಟ್ನಾ ತಂಡವನ್ನು ಮಣಿಸಿತು. ಹರ್ಯಾಣದ ವಿಕಾಸ್ ಕಂಡೋಲ 13 ರೈಡ್ ಪಾಯಿಂಟ್ಸ್ ಗಳಿಸಿದರೆ, ರವಿ ಕುಮಾರ್ 3 ಟ್ಯಾಕಲ್ ಪಾಯಿಂಟ್ ಮೂಲಕ ಗಮನಸೆಳೆದರು.