ಬುಲ್ಸ್‌ನಲ್ಲಿ ಉಳಿದ ಪವನ್, ಪಾಟ್ನಾದಲ್ಲೇ ಪ್ರದೀಪ್!
ಅಚ್ಚರಿ - 11 ತಂಡಗಳಲ್ಲಿ ಒಟ್ಟು 29 ಆಟಗಾರರು ರೀಟೈನ್, ಒಬ್ಬ ಆಟಗಾರನನ್ನೂ ಉಳಿಸಿಕೊಳ್ಳದ ಪುಣೇರಿ ಪಲ್ಟನ್, ಬೆಂಗಳೂರು ಬುಲ್ಸ್ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ಇಲ್ಲಿದೆ ಕಂಪ್ಲೀಟ್ ಲಿಸ್ಟ್.
ಮುಂಬೈ(ಮಾ.26): ಪ್ರೊ ಕಬಡ್ಡಿ 7ನೇ ಆವೃತ್ತಿಗೆ ತಂಡಗಳು ತಾವು ಉಳಿಸಿಕೊಂಡಿರುವ ಆಟಗಾರರ ಹೆಸರುಗಳನ್ನು ಬಹಿರಂಗಗೊಳಿಸಿವೆ. 12 ತಂಡಗಳ ಪೈಕಿ 11 ತಂಡಗಳು ಮಾತ್ರ ಆಟಗಾರರನ್ನು ಉಳಿಸಿಕೊಂಡಿದ್ದು, ಪುಣೇರಿ ಪಲ್ಟನ್ ತಂಡ ಎಲ್ಲಾ ಆಟಗಾರರನ್ನು ಕೈಬಿಟ್ಟಿದೆ.
ಈ ವರ್ಷ ಪ್ರತಿ ತಂಡಕ್ಕೆ 4ರ ಬದಲು ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಅದರಂತೆ 11 ತಂಡಗಳಲ್ಲಿ ಒಟ್ಟು 29 ಆಟಗಾರರು ರೀಟೈನ್ ಆಗಿದ್ದಾರೆ. ಕಳೆದ ವರ್ಷ 21 ಆಟಗಾರರಷ್ಟೇ ರೀಟೈನ್ ಆಗಿದ್ದರು. ಏ.8 ಹಾಗೂ 9ರಂದು ಮುಂಬೈನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಹೊಸದಾಗಿ ರಚಿಸಿಕೊಳ್ಳಲಿವೆ.
ಬುಲ್ಸ್‌ನಲ್ಲಿ ಉಳಿದ ಮೂವರು: ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಮೂವರು ಆಟಗಾರರನ್ನು ಉಳಿಸಿಕೊಂಡಿದೆ. ನಾಯಕ ರೋಹಿತ್ ಕುಮಾರ್, ರೈಡರ್ ಪವನ್ ಶೆರಾವತ್ ಹಾಗೂ ಆಲ್ರೌಂಡರ್ ಆಶಿಶ್ ಸಾಂಗ್ವಾನ್ ತಂಡದಲ್ಲಿ ಮುಂದುವರಿಯಲಿದ್ದಾರೆ. 3 ಬಾರಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಪ್ರದೀಪ್ ನರ್ವಾಲ್ ಸೇರಿದಂತೆ ನಾಲ್ವರನ್ನು ಉಳಿಸಿಕೊಂಡಿದೆ. ತೆಲುಗು ಟೈಟಾನ್ಸ್ ತಂಡ ಇಬ್ಬರು ಇರಾನಿ ಆಟಗಾರರು ಸೇರಿ ಒಟ್ಟು ನಾಲ್ವರನ್ನು ಉಳಿಸಿಕೊಂಡಿದೆ.
ಪ್ರೊ ಕಬಡ್ಡಿಯ ತಾರಾ ಆಟಗಾರರಾದ ರಾಹುಲ್ ಚೌಧರಿ, ಮೋನು ಗೋಯತ್, ಜಾನ್ ಕುನ್ ಲೀ, ರಿಶಾಂಕ್ ದೇವಾಡಿಗ, ಪ್ರಶಾಂತ್ ರೈ, ಸಿದ್ಧಾಥ್‌ರ್ ದೇಸಾಯಿ ಸೇರಿದಂತೆ ಇನ್ನೂ ಹಲವರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಬುಲ್ಸ್ ತಂಡದಲ್ಲಿ ಕೇವಲ ಮೂವರು ಆಟಗಾರರು ಉಳಿದುಕೊಂಡಿದ್ದಾರೆ. ರಾಹುಲ್ ಚೌಧರಿ ಸೇರಿ ಪ್ರಮುಖರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ‘ಸುವರ್ಣ ನ್ಯೂಸ್.ಕಾಂ’ ಮಾ.24ರಂದೇ ಸುದ್ದಿ ಪ್ರಕಟಿಸಿತ್ತು.
ರೀಟೈನ್ ಆದ ಆಟಗಾರರು
ಬೆಂಗಳೂರು ಬುಲ್ಸ್ ರೋಹಿತ್ ಕುಮಾರ್, ಪವನ್ ಶೆರಾವತ್, ಆಶಿಶ್ ಸಾಂಗ್ವಾನ್
ಬೆಂಗಾಲ್ ವಾರಿಯರ್ಸ್ ಬಲ್‌ದೇವ್ ಸಿಂಗ್, ಮಣೀಂದರ್ ಸಿಂಗ್
ದಬಾಂಗ್ ಡೆಲ್ಲಿ ಮಿರಾಜ್ ಶೇಖ್, ಜೋಗಿಂದರ್ ನರ್ವಾಲ್
ಗುಜರಾತ್ ಫಾರ್ಚೂನ್‌ಜೈಂಟ್ಸ್ ಸಚಿನ್, ಸುನಿಲ್ ಕುಮಾರ್
ಹರ್ಯಾಣ ಸ್ಟೀಲರ್ಸ್ ಕುಲ್ದೀಪ್ ಸಿಂಗ್, ವಿಕಾಸ್ ಖಂಡೋಲಾ
ಜೈಪುರ ಪಿಂಕ್ ಪ್ಯಾಂಥರ್ಸ್ಸ್ ದೀಪಕ್ ನಿವಾಸ್ ಹೂಡಾ, ಸಂದೀಪ್ ಧೂಲ್
ಪಾಟ್ನಾ ಪೈರೇಟ್ಸ್ ಪ್ರದೀಪ್ ನರ್ವಾಲ್, ವಿಕಾಸ್ ಜಗ್ಲನ್, ತುಷಾರ್ ಪಾಟೀಲ್, ಜವಹರ್ ಡಾಗರ್
ಪುಣೇರಿ ಪಲ್ಟನ್ - ಎಲ್ಲಾ ಆಟಾಗಾರರು ರಿಲೀಸ್
ತಮಿಳ್ ತಲೈವಾಸ್ ಅಜಯ್ ಠಾಕೂರ್, ಮಂಜೀತ್ ಚಿಲ್ಲಾರ್, ವಿಕ್ಟರ್ ಒಬಿರೋ
ತೆಲುಗು ಟೈಟಾನ್ಸ್ ಅರ್ಮಾನ್, ಮೊಹ್ಸೆನ್ ಮಗ್ಸೂದ್ಲು, ಫರ್ಹಾದ್ ರಹೀಮಿ, ಕೃಷ್ಣ ಮದನೆ
ಯು ಮುಂಬಾ ಫಜಲ್ ಅತ್ರಾಚೆಲಿ, ರಾಜ್‌ಗುರು ಸುಬ್ರಮಣಿಯನ್, ಅರ್ಜುನ್ ದೇಶ್‌ವಾಲ್
ಯು.ಪಿ.ಯೋಧಾ ಅಮಿತ್, ಸಚಿನ್ ಕುಮಾರ್