PKL7: ತಮಿಳ್ ತಲೈವಾಸ್ ವಿರುದ್ಧ ಪಾಟ್ನಾಗೆ 1 ಅಂಕಗಳ ರೋಚಕ ಗೆಲುವು!
ಪ್ರೊ ಕಬಡ್ಡಿ ಟೂರ್ನಿಯಲ್ಲಿ ಕಡಿಮೆ ಅಂಕದ ಪಂದ್ಯ ಕೂಡ ಅಷ್ಟೇ ರೋಚಕತೆ ಹುಟ್ಟುಹಾಕಿತ್ತು. ಪಾಟ್ನಾ ಪೈರೇಟ್ಸ್ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಅಂತಿಮ ಘಟ್ಟದವರೆಗೂ ಕುತೂಹಲ ಹಿಡಿದಿಟ್ಟುಕೊಂಡಿತ್ತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಮುಂಬೈ(ಜು.29): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ತಮಿಳ್ ತಲೈವಾಸ್ ಹಾಗೂ ಪಾಟ್ನಾ ಪೈರೇಟ್ಸ್ ನಡುವಿನ ಪಂದ್ಯದಲ್ಲಿ ಅಂಕಗಳ ಸುರಿಮಳೆ ಇಲ್ಲ, ಬಹುತೇಕ ರೈಡ್‌ಗಳಲ್ಲಿ ಅಂಕವಿಲ್ಲದೆ ರೈಡರ್ ವಾಪಾಸ್ಸಾಗಿದ್ದರು. ಆದರೂ ಪಂದ್ಯ ರೋಚಕ ಘಟ್ಟ ತಲುಪಿತ್ತು. ಕಡಿಮೆ ಅಂಕದ ಹೋರಾಟದಲ್ಲಿ ಪಾಟ್ನಾ ಪೈರೇಟ್ಸ್ 1 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು.
ಇದನ್ನೂ ಓದಿ: ಪ್ರೋ ಕಬಡ್ಡಿಯಲ್ಲಿ ಮಿಂಚಿದ ನಾಯಕ ವಿರಾಟ್ ಕೊಹ್ಲಿ!
ತಲೈವಾಸ್ ಹಾಗೂ ಪಾಟ್ನಾ ನಡುವಿನ ಪಂದ್ಯ ಆರಂಭಗೊಂಡಿದ್ದೇ ಎಂಪ್ಟಿ ರೈಡ್ ಮೂಲಕ. ಅಷ್ಟೇ ವೇಗದಲ್ಲಿ ತಮಿಳ್ ತಲೈವಾಸ್ ಅಂಕ ಬೇಟೆ ಆರಂಭಿಸಿತು. ಆರಂಭಿಕ 2 ನಿಮಿಷದಲ್ಲಿ 8 ಪ್ರಯತ್ನ ಮಾಡಿದರೂ ಪಾಟ್ನ ಅಂಕ ಖಾತೆ ತೆರೆಯಲಿಲ್ಲ. 2ನಿಮಿಷದ ಬಳಿಕ ಮಿಂಚಿನ ಪ್ರದರ್ಶನ ನೀಡಿದ ಪಾಟ್ನ 5ನೇ ನಿಮಿಷಕ್ಕೆ 4-4 ಅಂಕಗಳಲ್ಲಿ ಸಮಬಲ ಮಾಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಫಸ್ಟ್ ಹಾಫ್‌ನ ಸಂಪೂರ್ಣ 20 ನಿಮಿಷಗಳಲ್ಲಿ ಉಭಯ ತಂಡಗಳು ಮುನ್ನಡೆಗಾಗಿ ಕಠಿಣ ಹೋರಾಟ ನಡೆಸಿತು. ಆದರೆ 11-11 ಅಂಕಗಳಿಂದ ಮೊದಲಾರ್ಧ ಅಂತ್ಯಗೊಂಡಿತು. ದ್ವಿತಿಯಾರ್ಧದಲ್ಲೂ ಪಾಟ್ನಾ ಹಾಗೂ ತಲೈವಾಸ್ ಹೋರಾಟ ಅಷ್ಟೇ ರೋಚಕವಾಗಿತ್ತು. ಒಂದು ಅಂಕ ಬಿಟ್ಟುಕೊಡಲು ತಯಾರಿಲ್ಲ, ಇತ್ತ ಅಂಕ ಗಳಿಕೆಗೂ ಅವಕಾಶವಿಲ್ಲದ ಹೋರಾಟ ಅಭಿಮಾನಿಗಳಿಗೆ ಮನರಂಜನೆ ನೀಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ಉಭಯ ತಂಡ ಗೆಲವಿಗಾಗಿ ಇನ್ನಿಲ್ಲದ ಪ್ರಯತ್ನ ಮಾಡಿತು. ದ್ವಿತಿಯಾರ್ಧದ ಅಂತ್ಯದಲ್ಲಿ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಚುರುಕಿನ ಆಟವಾಡಿದ ಪಾಟ್ನಾ ಕೇವಲ 1 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಪಾಟ್ನಾ 24-23 ಅಂಕಗಳ ಅಂತರದಲ್ಲಿ ಜಯಭೇರಿ ಬಾರಿಸಿತು.