ಹೈದರಾಬಾದ್(ಜು.26): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಸತತ 2 ಗೆಲುವಿನೊಂದಿಗೆ ಮುನ್ನುಗ್ಗುತ್ತಿದೆ. ಯುಪಿ ಯೋಧ ವಿರುದ್ಧದ ಪಂದ್ಯದಲ್ಲಿ 44-19 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿದ ಗುಜರಾತ್ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆದರೆ ಆಡಿದ 2 ಪಂದ್ಯದಲ್ಲಿ ಮುಗ್ಗರಿಸಿರು ಯುಪಿ ಯೋಧ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !

ಮೊದಲ ಪಂದ್ಯದಲ್ಲಿ ಹಲವು ತಪ್ಪುಗಳನ್ನು ಮಾಡಿದ್ದ ಯುಪಿ ಯೋಧ ತಿದ್ದಿಕೊಂಡ ಲಕ್ಷಣ ಕಾಣುತ್ತಿಲ್ಲ. ಗುಜಾರಾತ್ ವಿರುದ್ದದ 2ನೇ ಪಂದ್ಯದಲ್ಲೂ ಅಂಕ ಗಳಿಸುವಲ್ಲಿ ವಿಫಲವಾಯಿತು. ಸಚಿನ್ ರೈಡ್‌ನೊಂದಿಗೆ ಅಂಕ ಖಾತೆ ತೆರೆದ ಗುಜರಾತ್ ಹಿಂತಿರುಗಿ ನೋಡಲೇ ಇಲ್ಲ. ಒಟ್ಟು 300 ರೈಡ್ ಅಂಕ ಸಂಪಾದಿಸೋ ಮೂಲಕ ಸಚಿನ್ ದಾಖಲೆ ಬರೆದರು. 

ಇದನ್ನೂ ಓದಿ:  ಪ್ರೊ ಕಬಡ್ಡಿ 7ನೇ ಆವೃತ್ತಿ ವಿಶೇಷತೆ!

ಮೊದಲಾರ್ಧದ 6ನೇ ನಿಮಿಷದಲ್ಲಿ ಯುಪಿ ಯೋಧಾ 4-4 ಅಂತದಲ್ಲಿ ಪಾಯಿಂಟ್ಸ್ ಸಮಬಲ ಮಾಡಿಕೊಂಡು ನಿಟ್ಟುಸಿರುಬಿಟ್ಟಿತು. ಆದರೆ ಅಷ್ಟೇ ವೇಗದಲ್ಲಿ ಗುಜರಾತ್ ತಿರುಗೇಟು ನೀಡಿತು. ಯುಪಿ ಯೋಧ ಹಿಂದಿಕ್ಕಿ ಭಾರಿ ಅಂತರ ಕಾಯ್ದುಕೊಂಡಿತು. ಫಸ್ಟ್ ಹಾಫ್ ಮುಕ್ತಾಯಕ್ಕೆ 19-9 ಅಂಕಗಳ ಮುನ್ನಡೆ ಕಾಯ್ದುಕೊಂಡ ಗುಜರಾತ್, ಆತ್ಮವಿಶ್ವಾಸದಲ್ಲಿ ತೇಲಾಡಿತು.

ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್ ಒಂದೇ ತಂಡದಲ್ಲಿ ಸೋದರರ ಮಿಂಚು

ದ್ವಿತಿಯಾರ್ಧದಲ್ಲೂ ಯುಪಿ ಯೋಧಾ ಹೋರಾಟ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಗುಜರಾತ್ ಅಂಕ 30 ದಾಟಿದರೂ, ಯುಪಿ ಯೋಧ 13 ಅಂಕದಲ್ಲೇ ಗಿರಕಿ ಹೊಡೆಯಿತು. ಸೆಕೆಂಡ್ ಅಂತ್ಯದಲ್ಲಿ ಗುಜರಾತ್ 44-19 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ಗರಿಷ್ಠ ಅಂತರದ ಗೆಲುವು ಸಾಧಿಸಿದ ಗುಜರಾತ್ ಮೊದಲ ಸ್ಥಾನಕ್ಕೇರಿತು.