ಪ್ರೊ ಕಬಡ್ಡಿ 6ನೇ ಆವೃತ್ತಿ ಮತ್ತೊಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾಯ್ತು. ಯುಪಿ ಯೋಧ ಹಾಗೂ ಪಾಟ್ನಾ ಪೈರೇಟ್ಸ್ ವಿರುದ್ಧದ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಚೆನ್ನೈ (ಅ.11): ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ಮೊದಲ ಗೆಲುವು ದಾಖಲಿಸಿದೆ. ಯುಪಿ ಯೋಧ ವಿರುದ್ದ ನಡೆದ ರೋಚಕ ಪಂದ್ಯದಲ್ಲಿ ಪಾಟ್ನಾ 43-41 ಅಂಕಗಳ ಅಂತರದಲ್ಲಿ ಪಾಟ್ನಾ ಗೆಲುವು ದಾಖಲಿಸಿದೆ.

Scroll to load tweet…

ಗೆಲುವಿಗಾಗಿ ಯುಪಿ ಯೋಧ ಹಾಗೂ ಪಾಟ್ನಾ ಜಿದ್ದಾಜಿದ್ದಿನ ಹೋರಾಟ ನಡೆಸಿತ್ತು. ಮೊದಲಾರ್ಧದಲ್ಲಿ ಪಾಟ್ನಾ ಕೇವಲ 1 ಅಂಕದಿಂದ ಮುನ್ನಡೆ ಪಡೆದುಕೊಂಡಿತು. ಪಾಟ್ನಾ 21-20 ಅಂಕ ಸಂಪಾದಿಸಿತು. 

Scroll to load tweet…

ದ್ವಿತೀಯಾರ್ಧದಲ್ಲಿ ಆರಂಭದಲ್ಲಿ ಪಾಟ್ನಾ ಮುನ್ನಡೆ ಅಂತರವನ್ನ ಹೆಚ್ಚಿಸಿತು. ಯುಪಿ ಕೂಡ ಪ್ರಬಲ ಪೈಪೋಟಿ ನೀಡಿತು. ಆದರೆ ದ್ವಿತೀಯಾರ್ಧದ ಅಂತ್ಯದಲ್ಲಿ ಪಾಟ್ನಾ 43- 41 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.