ಅಹಮದಾಬಾದ್(ನ.22): ಡುಬ್ಕಿ ಕಿಂಗ್ ಪ್ರದೀಪ್ ನರ್ವಾಲ್ ಹಾಗೂ ದೀಪಕ್ ನರ್ವಾಲ್‌ರ ಅಮೋಘ ರೈಡಿಂಗ್‌ನ ನೆರವಿ ನಿಂದ ಪಾಟ್ನಾ ಪೈರೇಟ್ಸ್, ಪ್ರೊ ಕಬಡ್ಡಿ 6ನೇ ಆವೃ ತ್ತಿಯ ‘ಬಿ’ ಗುಂಪಿನ ಪಂದ್ಯದಲ್ಲಿ ತಮಿಳ್ ತಲೈವಾಸ್ ವಿರುದ್ಧ 45-27 ಅಂಕಗಳ ಭರ್ಜರಿ ಜಯ ಸಾಧಿ ಸಿತು. ಪಾಟ್ನಾ ಈ ಗೆಲುವಿನೊಂದಿಗೆ ಬಿ ಗುಂಪಿನಲ್ಲಿ 38 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. 

ಪಾಟ್ನಾ ಈವರೆಗೂ ತಾನು ಆಡಿರುವ 13 ಪಂದ್ಯ ಗಳಲ್ಲಿ 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಮೋಘ ಪ್ರದರ್ಶನ ತೋರಿದ ಪಾಟ್ನಾದ ಡುಬ್ಕಿ ಕಿಂಗ್ ಪ್ರದೀಪ್ ನರ್ವಾಲ್ 13, ದೀಪಕ್ ನರ್ವಾಲ್ 10 ಮತ್ತು ಮಂಜಿತ್ 8 ಅಂಕಗಳನ್ನು ಗಳಿಸಿ ತಂಡದ ಗೆಲುವಿಗೆ ಕಾರಣರಾದರು. ತಮಿಳ್ ತಲೈವಾಸ್ ಪರ ನಾಯಕ ಅಜಯ್ ಠಾಕೂರ್ 8, ಮಂಜಿತ್ ಚಿಲ್ಲಾರ್5 ಅಂಕಗಳ ಗಳಿಸಿ ದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ಯಶಸ್ವಿಯಾದರು.

ಇಲ್ಲಿನ ಅರೆನಾ ಟ್ರಾನ್ಸ್ ಸ್ಟೇಡಿಯಾದಲ್ಲಿ ನಡೆದ ಪಂದ್ಯ ಸಾಕಷ್ಟು ರೋಚಕ ತಿರುವುಗಳಿಗೆ ಸಾಕ್ಷಿಯಾಯಿತು. ಮೊದಲ ರೈಡ್‌ನಲ್ಲೇ ತಲೈವಾಸ್‌ನ ಮಂಜಿತ್ ಚಿಲ್ಲಾರ್‌ರನ್ನು ಬಲಿ ಪಡೆದ ಪೈರೇಟ್ಸ್ ಅಮೋಘವಾಗಿ ಆರಂಭಿಸಿದರು. ದೀಪಕ್ ನರ್ವಾಲ್, ಪ್ರದೀಪ್‌ಗೆ ಉತ್ತಮ ಸಾಥ್ ನೀಡಿ ದರು. 

ತಲೈವಾಸ್‌ನ ಅಜಯ್ ಠಾಕೂರ್ ಅಂಕ ಗಳಿಸಲು ಪರದಾಡುತ್ತಿದ್ದರೆ, ಇತ್ತ ಪಾಟ್ನಾ ಆಟಗಾರರು ಪಾರಮ್ಯ ಮೆರೆ ಯಲು ಶುರು ಮಾಡಿದರು. ಪಂದ್ಯದ 6ನೇ ನಿಮಿಷ ದಲ್ಲೇ ತಲೈವಾಸ್ ಅನ್ನು ಆಲೌಟ್ ಆಡಿದ ಪಾಟ್ನಾ 19-1 ಅಂಕಗಳ ಭಾರೀ ಮುನ್ನಡೆ ಕಾಯ್ದುಕೊಂಡಿತು. ಇದರೊಂದಿಗೆ ಈ ಪಂದ್ಯ ನಮ್ಮದೇ ಎಂದು ಆರಂಭದಲ್ಲೇ
ಮುನ್ಸೂಚನೆ ನೀಡಿದರು. ನಿಧಾನವಾಗಿ ಚೇತರಿಸಿಕೊಂಡ ತಲೈವಾಸ್ ಆಟಗಾರರು ತಮ್ಮ ಕತ್ತಿಬೀಸಲು ಆರಂಭಿಸಿದರು. ದ್ವಿತೀಯಾರ್ಧದ 11ನೇ ನಿಮಿಷದಲ್ಲಿ ತಲೈವಾಸ್ ಅನ್ನು ಆಲೌಟ್ ಮಾಡಿದ ಪಾಟ್ನಾ 27- 20 ಮುನ್ನಡೆ ಸಾಧಿಸಿತು.

ಡುಬ್ಕಿ ಕಿಂಗ್ ಪ್ರದೀಪ್ ರೈಡಿಂಗ್ ಮೋಡಿಗೆ ಚಿತ್ತದ ತಲೈವಾಸ್ ಪಂದ್ಯ ಮುಕ್ತಾಯ ಗೊಳ್ಳಲು ಒಂದು ನಿಮಿಷ ಬಾಕಿ ಇರುವಂತೆ 3ನೇ ಬಾರಿ ಆಲೌಟ್‌ಗೆ ಗುರಿಯಾಗಿ 42-27 ಅಂಕಗಳ ಭಾರೀ ಹಿನ್ನಡೆ ಅನು ಭವಿಸಿತು. ಅಂತಿಮವಾಗಿ ಪಾಟ್ನಾ 18 ಅಂಕಗಳ ಭರ್ಜರಿ ಜಯ ಸಾಧಿಸಿತು.

ಗೆಲುವಿನ ಹಾದಿಗೆ ಮರಳಿದ ಗುಜರಾತ್
ಸಾಂಘಿಕ ಹೋರಾಟ ಪ್ರದರ್ಶಿಸಿದ ಗುಜರಾತ್ ಫಾರ್ಚೂನ್‌ಜೈಂಟ್ಸ್, ಯು ಮುಂಬಾ ಕೈಯಿಂದ ಗೆಲುವನ್ನು ಕಸಿದು ಜಯದ ಹಾದಿಗೆ ಮರಳಿತು. ಬುಧವಾರ ನಡೆದ
2ನೇ ಪಂದ್ಯದಲ್ಲಿ ಮುಂಬಾ ವಿರುದ್ಧ ಗುಜರಾತ್ 39-25 ಅಂಕಗಳ ರೋಚಕ ಜಯ ಸಾಧಿಸಿತು.  ಮಂಗಳವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಸೋಲುಂಡಿತ್ತು. ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿ ಮುಂಬಾ, ಮೊದಲಾರ್ಧದ ಅಂತ್ಯಕ್ಕೆ 21-16 ಅಂಕಗಳ ಮುನ್ನಡೆ ಸಾಧಿಸಿ, ಗುಜರಾತ್‌ಗೆ ಮತ್ತೊಂದು ಆಘಾತ ನೀಡುವ ಮುನ್ಸೂಚನೆ ನೀಡಿತ್ತು. ಆದರೆ, ದ್ವಿತೀಯಾರ್ಧದಲ್ಲಿ ತಿರುಗಿ ಬಿದ್ದ ಗುಜರಾತ್ ನಿಧಾನವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿ, ಗೆಲುವನ್ನು ಒಲಿಸಿಕೊಂಡರು.
ಟರ್ನಿಂಗ್ ಪಾಯಿಂಟ್: ಗುಜರಾತ್, ಪಂದ್ಯದ 37ನೇ ನಿಮಿಷದಲ್ಲಿ ಆಲೌಟ್ ಹಾಗೂ ಅಂತಿಮ ನಿಮಿಷದಲ್ಲಿ ರೈಡಿಂಗ್‌ನಲ್ಲಿ 2 ಅಂಕ ಗಳಿಸಿದ ಪ್ರಪಂಜನ್ ಮುಂಬಾದಿಂದ ಗೆಲುವು ಕಸಿದುಕೊಂಡರು

ವಿನಯ್ ಕುಮಾರ್ ಡಿ.ಬಿ.