ಪ್ರೊ ಕಬಡ್ಡಿ: ಬುಲ್ಸ್-ಪಾಟ್ನಾ ಪಂದ್ಯ ರೋಚಕ ಟೈನಲ್ಲಿ ಅಂತ್ಯ

7ನೇ ನಿಮಿಷದಲ್ಲಿ ಪಾಟ್ನಾ ಆಲೌಟ್ ಮಾಡಿ 17-10ರ ಮುನ್ನಡೆ ಪಡೆದ ಬುಲ್ಸ್, ಮೊದಲಾರ್ಧವನ್ನು 20-11ರಲ್ಲಿ ಮುನ್ನಡೆಯಿತು. ದ್ವಿತೀಯಾರ್ಧದ 24ನೇ ನಿಮಿಷ ದಲ್ಲಿ ಬುಲ್ಸ್ ಆಲೌಟ್ ಮಾಡಿದ ಪಾಟ್ನಾ 21-21ರಲ್ಲಿ ಸಮಬಲ ಸಾಧಿಸಿತು. 35ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಆಗಿ 34-35 ರಿಂದ ಹಿನ್ನಡೆಯಿತು.

Pro Kabaddi 2018 Patna Pirates play out a thrilling tie against Bengaluru Bulls

ಪಂಚಕುಲಾ[ಡಿ.20]: ಪ್ರೊ ಕಬಡ್ಡಿ 6ನೇ ಆವೃತ್ತಿಯಲ್ಲಿ ಪ್ಲೇ-ಆಫ್ ಗೇರಿರುವ ಬೆಂಗಳೂರು ಬುಲ್ಸ್, ನಿರ್ಣಾಯಕ ಘಟ್ಟದಲ್ಲಿ ಪ್ರಚಂಡ ಲಯ ಕಂಡುಕೊಂಡಿದೆ. ಪಾಟ್ನಾ ಪೈರೇಟ್ಸ್ ವಿರುದ್ಧ ಬುಧವಾರ 40-40ರಲ್ಲಿ ಟೈ ಸಾಧಿಸಿದ ಬುಲ್ಸ್, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 

ಈ ಪಂದ್ಯ ಟೈ ಆಗಿದ್ದರಿಂದ ಪಾಟ್ನಾ ಪ್ಲೇ-ಆಫ್ ಹಾದಿ ಕಠಿಣಗೊಂಡಿದೆ. ತಂಡ 20 ಪಂದ್ಯಗಳಲ್ಲಿ 9ರಲ್ಲಿ ಗೆದ್ದು 55 ಅಂಕ ಗಳಿಸಿದೆ. ತಂಡಕ್ಕೆ ಇನ್ನು 2 ಪಂದ್ಯ ಬಾಕಿ ಇದ್ದು, 2೨ರಲ್ಲೂ ಗೆಲ್ಲಲೇಬೇಕಿದೆ. ಇಲ್ಲವಾದಲ್ಲಿ, ಟೈಟಾನ್ಸ್ ಹಾಗೂ ಬೆಂಗಾಲ್ ತಂಡಗಳು, ಪಾಟ್ನಾ ಹಿಂದಿಕ್ಕಿ ಪ್ಲೇ-ಆಫ್‌ಗೇರುವ ಸಾಧ್ಯತೆ ಇದೆ.

17ನೇ ನಿಮಿಷದಲ್ಲಿ ಪಾಟ್ನಾ ಆಲೌಟ್ ಮಾಡಿ 17-10ರ ಮುನ್ನಡೆ ಪಡೆದ ಬುಲ್ಸ್, ಮೊದಲಾರ್ಧವನ್ನು 20-11ರಲ್ಲಿ ಮುನ್ನಡೆಯಿತು. ದ್ವಿತೀಯಾರ್ಧದ 24ನೇ ನಿಮಿಷ ದಲ್ಲಿ ಬುಲ್ಸ್ ಆಲೌಟ್ ಮಾಡಿದ ಪಾಟ್ನಾ 21-21ರಲ್ಲಿ ಸಮಬಲ ಸಾಧಿಸಿತು. 35ನೇ ನಿಮಿಷದಲ್ಲಿ ಬುಲ್ಸ್ ಆಲೌಟ್ ಆಗಿ 34-35 ರಿಂದ ಹಿನ್ನಡೆಯಿತು.

ಕೊನೆ ನಿಮಿಷದಲ್ಲಿ 3 ಅಂಕದಿಂದ ಮುಂದಿದ್ದ ಬುಲ್ಸ್, ಕಾಶಿಲಿಂಗ್ ಮಾಡಿದ ಎಡವಟ್ಟಿನಿಂದಾಗಿ, 2 ಅಂಕ ಬಿಟ್ಟುಕೊಟ್ಟಿತು. ಅಂತಿಮ ಡು ಆರ್ ಡೈ ರೈಡ್‌ನಲ್ಲಿ ಪವನ್ ಔಟಾಗಿದ್ದರಿಂದ ಪಂದ್ಯ ಟೈಗೊಂಡಿತು.

ಟರ್ನಿಂಗ್ ಪಾಯಿಂಟ್: ಕೊನೆ ನಿಮಿಷದಲ್ಲಿ ಕಾಶಿ ಟ್ಯಾಕಲ್ ವೇಳೆ ಮಾಡಿದ ಎಡವಟ್ಟಿನಿಂದ ಗೆಲುವು ಬುಲ್ಸ್ ಕೈಜಾರಿತು. 

ಶ್ರೇಷ್ಠ ರೈಡರ್: ಪ್ರದೀಪ್ (17 ಅಂಕ)
ಶ್ರೇಷ್ಠ ಡಿಫೆಂಡರ್: ಮಹೇಂದರ್(ಬುಲ್ಸ್, 06 ಅಂಕ)

Latest Videos
Follow Us:
Download App:
  • android
  • ios