ಇಲ್ಲಿನ ಮೋತಿಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಸ್ಟೀಲರ್ಸ್ ತಂಡ ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಮೊದಲಿಗೆ ಸಚಿನ್’ರನ್ನು ಟ್ಯಾಕಲ್ ಮಾಡುವ ಮೂಲಕ ಮೊದಲ ಅಂಕ ಕಲೆಹಾಕಿದ ಸ್ಟೀಲರ್ಸ್ ತಂಡ ನಿರಂತರವಾಗಿ ಅಂಕ ಹೆಚ್ಚಿಸಿಕೊಳ್ಳುತ್ತಲೇ ಸಾಗಿತು.

ಸೋನೆಪತ್[ಅ.12): ಸ್ಟಾರ್ ರೈಡರ್ ಮೊನು ಗೋಯೆತ್ ಹಾಗೂ ಡಿಫೆಂಡರ್ ಕುಲ್ದೀಪ್ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಹರಿಯಾಣ ಸ್ಟೀಲರ್ಸ್ ತಂಡವು ಗುಜರಾತ್ ಸೂಪರ್’ಜೈಂಟ್ಸ್ ತಂಡವನ್ನು 32-25 ಅಂಕಗಳ ಅಂತರದಿಂದ ಮಣಿಸುವ ಮೂಲಕ ತವರಿನಲ್ಲಿ ಶುಭಾರಂಭ ಮಾಡಿದೆ.

ಇಲ್ಲಿನ ಮೋತಿಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಕಣಕ್ಕಿಳಿದ ಸ್ಟೀಲರ್ಸ್ ತಂಡ ಆರಂಭದಿಂದಲೇ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಮೊದಲಿಗೆ ಸಚಿನ್’ರನ್ನು ಟ್ಯಾಕಲ್ ಮಾಡುವ ಮೂಲಕ ಮೊದಲ ಅಂಕ ಕಲೆಹಾಕಿದ ಸ್ಟೀಲರ್ಸ್ ತಂಡ ನಿರಂತರವಾಗಿ ಅಂಕ ಹೆಚ್ಚಿಸಿಕೊಳ್ಳುತ್ತಲೇ ಸಾಗಿತು. ಮೊದಲ 4ನೇ ನಿಮಿಷದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡುವ ಮೂಲಕ 9-1 ಅಂತರದ ಮುನ್ನಡೆ ಸಾಧಿಸಿತು. ಆ ಬಳಿಕವೂ ಮುನ್ನಡೆ ಬಿಟ್ಟುಕೊಡದ ಸ್ಟೀಲರ್ಸ್ ತಂಡ ಮೊದಲಾರ್ಧ ಮುಕ್ತಾಯದ ವೇಳೆಗೆ 20-13 ಅಂಕಗಳ ಮುನ್ನಡೆ ಸಾಧಿಸಿತು.

Scroll to load tweet…

ಮೊದಲಾರ್ಧದಲ್ಲಿ ಅನುಭವಿಸಿದ್ದ ಹಿನ್ನಡೆ ಮೆಟ್ಟಿ ನಿಲ್ಲುವ ಛಲದೊಂದಿಗೆ ಕಣಕ್ಕಿಳಿದ ಹಾಲಿ ರನ್ನರ್ ಅಪ್ ಗುಜರಾತ್ ಕೂಡಾ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿಯಾಟಕ್ಕೆ ಮೊರೆ ಹೋಯಿತು. ಕೆ. ಪ್ರಪಂಜನ್ ಮಿಂಚಿನ ದಾಳಿ ನಡೆಸುವ ಮೂಲಕ ಅಂತರವನ್ನು 21-17ಕ್ಕೆ ತಗ್ಗಿಸಿದರು. ಆದರೆ ಮಹೇಂದ್ರ ರಜಪೂತ್ ಒಂದೇ ಒಂದು ಅಂಕ ಕಲೆಹಾಕಲು ಸಫಲವಾಗಲಿಲ್ಲ. ಇದು ಗುಜರಾತ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಸುರೇಂದ್ರ ನಾಡಾ ಅನುಪಸ್ಥಿತಿಯಲ್ಲೂ ಸ್ಟೀಲರ್ಸ್ ಭರ್ಜರಿ ಪ್ರದರ್ಶನ ತೋರುವುದರೊಂದಿಗೆ ಮೊದಲ ಜಯ ದಾಖಲಿಸಿತು. 

ಇನ್ನು ’ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡವನ್ನು 37-41 ಅಂಕಗಳಿಂದ ರೋಚಕವಾಗಿ ಮಣಿಸಿದ ದಬಾಂಗ್ ಡೆಲ್ಲಿ ಆರನೇ ಆವೃತ್ತಿಯಲ್ಲಿ ಮೊದಲ ಜಯದ ಸಿಹಿಯುಂಡಿತು. ಪುಣೇರಿ ಪಲ್ಟಾನ್ ತಂಡದ ಬಲಿಷ್ಠ ರೈಡರ್ ನಿತಿನ್ ತೋಮರ್ ಏಕಾಂಗಿ[20 ಅಂಕ] ಹೋರಾಟದ ಹೊರತಾಗಿಯೂ ದಬಾಂಗ್ ಡೆಲ್ಲಿಯ ಸಂಘಟಿತ ಪ್ರದರ್ಶನದೆದುರು ತಲೆಬಾಗಬೇಕಾಯಿತು.

Scroll to load tweet…

ಪಂದ್ಯದ ಆರಂಭದಿಂದಲೂ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿತು. ಮೊದಲಾರ್ಧ ಮುಕ್ತಾಯದ ವೇಳೆಗೆ ಪುಣೇರಿ ಪಲ್ಟಾನ್ ತಂಡ 22-20 ಅಂಕಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ದ್ವಿತಿಯಾರ್ಧದಲ್ಲಿ ಭರ್ಜರಿ ಕಮ್’ಬ್ಯಾಕ್ ಮಾಡಿದ ಡೆಲ್ಲಿ ರೋಚಕ ಜಯ ಸಾಧಿಸಿತು.