ಹರಿಯಾಣ(ಅ.14): ಪ್ರೊ ಕಬಡ್ಡಿ ಲೀಗ್ ಟೂರ್ನಿಯ 15ನೇ ಪಂದ್ಯದಲ್ಲಿ ಯುಪಿ ಯೋಧಾ ವಿರುದ್ಧ ಪಾಟ್ನಾ ಪೈರೇಟ್ಸ್  43-37 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಪುಣೇರಿ ಪಲ್ಟಾನ್ 45-27 ಅಂತರದ ಗೆಲುವು ಸಾಧಿಸಿದೆ.

ಯೋಧಾ ವಿರುದ್ಧದ ಗೆಲುವಿನಿಂದ ಪಾಟ್ನಾ ಪೈರೇಟ್ಸ್  ಅಂಕ ಪಟ್ಟಿಯ ಬಿ ಗುಂಪಿನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಪಾಟ್ನ ಪೈರೇಟ್ಸ್ ಆಡಿದ 3 ಪಂದ್ಯದಲ್ಲಿ 2 ಗೆಲುವು ಹಾಗೂ 1 ಸೋಲು ಅನುಭವಿಸಿದೆ.

ಇನ್ನು ಹರಿಯಾಣ ಸ್ಟೀಲರ್ಸ್ ವಿರುದ್ಧ ಗೆಲುವು ಸಾಧಿಸಿದ ಪುಣೇರಿ ಪಲ್ಟಾನ್ ಆಡಿದ 4 ಪಂದ್ಯದಲ್ಲಿ 2 ಗೆಲುವು ಸಾಧಿಸಿ, ಎ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಂಲಕರಿಸಿದೆ.