ಕೆಲದಿನಗಳಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬ್ಯಾಟ್ಸ್'ಮನ್ ಒಬ್ಬ ಸಿಕ್ಸರ್ ಬಾರಿಸುತ್ತಿದ್ದಂತೆ, ನಾನ್ ಸ್ಟ್ರೈಕರ್ ಕೊನೆಯಲ್ಲಿದ್ದ ವಿಕೆಟ್'ಗಳನ್ನು ಕಿತ್ತು ಹೋಗುವಂತೆ ಓಜಾ ಜಾಡಿಸಿ ಒದ್ದಿದ್ದಾರೆ.
ಕ್ರಿಕೆಟ್ 'ಜಂಟಲ್ ಮ್ಯಾನ್'ಗಳ ಆಟ' ಎಂದು ಕರೆಯಲಾಗುತ್ತದೆ. ಬ್ರಿಟೀಷರು ಪರಿಚಯಿಸಿದ ಈ ಕ್ರೀಡೆ ಕೂಡಾ ವಿವಾದಗಳಿಂದ ಹೊರತಾಗಿಲ್ಲ. ಮೈದಾನದಲ್ಲೇ ಸ್ಲೆಡ್ಜಿಂಗ್, ಕಪಾಳಮೋಕ್ಷ, ಗುದ್ದಾಟಗಳಿಗೂ ಕ್ರಿಕೆಟ್ ಸಾಕ್ಷಿಯಾಗಿರುವುದನ್ನು ನಾವು ಕಂಡಿದ್ದೇವೆ.
ಇದೀಗ ಅಂತಹದ್ದೇ ಅನುಚಿತ ವರ್ತನೆಗೆ ಟೀಂ ಇಂಡಿಯಾ ಸ್ಪಿನ್ನರ್ ಪ್ರಗ್ಯಾನ್ ಓಜಾ ಸಾಕ್ಷಿಯಾಗಿದ್ದಾರೆ.
ಕೆಲದಿನಗಳಿಂದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಬ್ಯಾಟ್ಸ್'ಮನ್ ಒಬ್ಬ ಸಿಕ್ಸರ್ ಬಾರಿಸುತ್ತಿದ್ದಂತೆ, ನಾನ್ ಸ್ಟ್ರೈಕರ್ ಕೊನೆಯಲ್ಲಿದ್ದ ವಿಕೆಟ್'ಗಳನ್ನು ಕಿತ್ತು ಹೋಗುವಂತೆ ಓಜಾ ಜಾಡಿಸಿ ಒದ್ದಿದ್ದಾರೆ.
2013ರಿಂದ ಟೀಂ ಇಂಡಿಯಾದಿಂದ ಹೊರಬಿದ್ದಿರುವ ಎಡಗೈ ಸ್ಪಿನ್ನರ್ ಓಜಾ, ಮುಂಬೈನಲ್ಲಿ ವೆಸ್ಟ್'ಇಂಡಿಸ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಓಜಾ ಇದುವರೆಗೂ ಒಟ್ಟು 24 ಟೆಸ್ಟ್, 18 ಏಕದಿನ ಹಾಗೂ 6 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು 144 ವಿಕೆಟ್ ಕಬಳಿಸಿದ್ದಾರೆ.