ವಿಜಿಯನಗರಂ[ಸೆ.26]: ಬಹು ನಿರೀಕ್ಷಿತ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಐಸಿಸಿ ವಿಶ್ವ ಚಾಂಪಿಯನ್‌ಶಿಪ್‌ನ ಭಾಗವಾಗಿರುವ ಸರಣಿಯಲ್ಲಿ ಪೂರ್ಣ ಅಂಕಗಳನ್ನು ಗಳಿಸಲು ಭಾರತ ಎದುರು ನೋಡುತ್ತಿದೆ. ಈ ಸರಣಿಯಲ್ಲಿ ಭಾರತ ಕೆಲ ಮಹತ್ವದ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. 

ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಮೊದಲ ಜಯದ ತವ​ಕ!

ಏಕದಿನ, ಟಿ20 ಮಾದರಿಯಲ್ಲಿ ಆರಂಭಿಕನಾಗಿ ಯಶಸ್ಸು ಕಂಡಿರುವ ರೋಹಿತ್ ಶರ್ಮಾರನ್ನು ಟೀಂ ಇಂಡಿಯಾ ಟೆಸ್ಟ್‌ನಲ್ಲೂ ಆರಂಭಿಕನನ್ನಾಗಿ ಆಡಿಸಲಿದೆ. ಆ ಸರಣಿಗೆ ಸಿದ್ಧತೆ ನಡೆಸಲು ರೋಹಿತ್ ಗೆ ಉತ್ತಮ ಅವಕಾಶ ಸಿಕ್ಕಿದೆ. ಗುರುವಾರದಿಂದ ಇಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ 3 ದಿನಗಳ ಅಭ್ಯಾಸ ಪಂದ್ಯದಲ್ಲಿ, ಬಿಸಿಸಿಐ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ರೋಹಿತ್ ಆರಂಭಿಕನಾಗಿ ಆಡಲಿದ್ದಾರೆ. ಟೆಸ್ಟ್ ಸರಣಿಯಲ್ಲಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲಿರುವ ಮಯಾಂಕ್ ಅಗರ್‌ವಾಲ್ ಸಹ ಈ ಪಂದ್ಯದಲ್ಲಿ ಆಡಲಿದ್ದು, ಇಬ್ಬರ ನಡುವೆ ಹೊಂದಾಣಿಕೆ ವೃದ್ಧಿಸಲು ಅವಕಾಶ ಸಿಗಲಿದೆ. 

INDvSA:ನೆಚ್ಚಿನ ಮೈದಾನದಲ್ಲಿ ಶಾಕ್; ಆದರೂ ದಾಖಲೆ ಬರೆದ ರೋಹಿತ್!

ಅ.2ರಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಸರಣಿಯಲ್ಲಿ ರೋಹಿತ್‌ಗೆ ಕಗಿಸೋ ರಬಾಡ, ವರ್ನೊನ್ ಫಿಲಾಂಡರ್, ಲುಂಗಿ ಎನ್‌ಗಿಡಿಯಂತಹ ಗುಣಮಟ್ಟದ ವೇಗದ ಬೌಲರ್‌ಗಳಿಂದ ಸವಾಲು ಎದುರಾಗಲಿದೆ. ಆ ಬೌಲರ್‌ಗಳ ದಾಳಿಯನ್ನು ಅಭ್ಯಾಸ ಪಂದ್ಯದಲ್ಲೇ ಎದುರಿಸಿ, ಟೆಸ್ಟ್ ಸರಣಿಗೆ ಅಗತ್ಯವಿರುವ ಸೂಕ್ತ ರಣತಂತ್ರಗಳನ್ನು ರೂಪಿಸಿಕೊಳ್ಳಲು ರೋಹಿತ್‌ಗೆ ಅವಕಾಶ ಸಿಕ್ಕಿದೆ. ಟೆಸ್ಟ್‌ನಲ್ಲಿ ಸಾಧಾರಣ ಆಟ 2013ರಲ್ಲಿ ರೋಹಿತ್ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಆಡಲು ಆರಂಭಿಸಿದರು. ಅಲ್ಲಿಂದ ಅವರ ವೃತ್ತಿಬದುಕು ಹೊಸ ತಿರುವು ಪಡೆದುಕೊಂಡಿತು. ಸೀಮಿತ ಓವರ್ ಮಾದರಿ ಯಲ್ಲಿ ತಂಡದ ಬ್ಯಾಟಿಂಗ್ ಆಧಾರಸ್ತಂಭವಾಗಿ ಬೆಳೆದಿರುವ ರೋಹಿತ್, ಟೆಸ್ಟ್ ಮಾದರಿ ಯಲ್ಲೂ ಅದೇ ರೀತಿ ಯಶಸ್ಸು ಕಾಣಬಲ್ಲರಾ? ಎನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

27 ಟೆಸ್ಟ್‌ಗಳನ್ನು ಆಡಿರುವ ರೋಹಿತ್, 39.62ರ ಸರಾಸರಿಯಲ್ಲಿ ಬ್ಯಾಟ್ ಮಾಡಿ ದ್ದಾರೆ. ಅವರಿಂದ 3 ಶತಕಗಳು ಮಾತ್ರ ದಾಖಲಾಗಿವೆ. ಈ ಅಂಕಿ-ಅಂಶಗಳು ಅವರ ಸಾಮರ್ಥ್ಯಕ್ಕೆ ನ್ಯಾಯ ಒದಗಿಸುವುದಿಲ್ಲ. ಅಜಿಂಕ್ಯ ರಹಾನೆ ಹಾಗೂ ಹನುಮ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಕಾರಣ, ರೋಹಿತ್ ಟೆಸ್ಟ್ ತಂಡದಲ್ಲಿ ಕಾಯಂ ಸ್ಥಾನ ಪಡೆಯುಬೇಕು ಎನ್ನುವುದಾದರೆ ಅವರು ಆರಂಭಿಕನಾಗಿಯೇ ಆಡಬೇಕು. ಶಿಖರ್ ಧವನ್, ಮುರಳಿ ವಿಜಯ್, ಕೆ. ಎಲ್.ರಾಹುಲ್ ಮೂವರೂ ಲಯ ಕಳೆದುಕೊಂಡು ತಂಡದಿಂದ ಹೊರಬಿದ್ದಿರುವಾಗ ಸಿಕ್ಕಿರುವ ಅವಕಾಶವನ್ನು ರೋಹಿತ್ ಸದ್ಬಳಕೆ ಮಾಡಿಕೊಳ್ಳಬೇಕಿದೆ.