ಬೆಂಗ​ಳೂರು(ಅ.06): ಮಲೇ​ಷ್ಯಾದ ಕುವಾಂಟಾ​ನ್‌​ನಲ್ಲಿ ಇದೇ ತಿಂಗಳ 20ರಿಂದ ಆರಂಭ​ಗೊ​ಳ್ಳ​ಲಿ​ರುವ ಏಷ್ಯನ್‌ ಚಾಂಪಿ​ಯನ್ಸ್‌ ಟ್ರೋಫಿ​ಯಲ್ಲಿ ಪಾಲ್ಗೊ​ಳ್ಳ​ಲಿ​ರುವ ಭಾರತ ತಂಡ​ವನ್ನು ಪ್ರಕ​ಟಿ​ಸ​ಲಾ​ಗಿದ್ದು, ಪಿ.ಆರ್‌. ಶ್ರೀಜೇಶ್‌ ತಂಡವನ್ನು ಮುನ್ನಡೆಸಲಿದ್ದರೆ, ತಂಡದ ಉಪ​ನಾ​ಯ​ಕನಾಗಿ ಮನ್‌​ಪ್ರೀತ್‌ ಸಿಂಗ್‌ ಆಯ್ಕೆಯಾಗಿದ್ದಾರೆ.

ಇನ್ನು ಗಾಯದ ಸಮ​ಸ್ಯೆಗೆ ಸಿಲು​ಕಿ​ರುವ ರಾಜ್ಯದ ಹಿರಿಯ ಆಟ​ಗಾರ ವಿ.ಆರ್‌. ರಘು​ನಾಥ್‌ಗೆ ವಿಶ್ರಾಂತಿ ನೀಡ​ಲಾ​ಗಿದ್ದರೆ, ಎಸ್‌.ಕೆ. ಉತ್ತಪ್ಪ, ನಿಕಿನ್‌ ತಿಮ್ಮಯ್ಯ ಹಾಗೂ ಎಸ್‌.ವಿ. ಸುನೀಲ್‌ ಆಯ್ಕೆಯಾಗಿದ್ದಾರೆ. ರಘುನಾಥ್‌ ಬದಲಿಗೆ ಸನ್ಸಾ​ರ್‌​ಪುರ್‌ನ ಡೆಫೆಂಡರ್‌ ಜಸ್ಜೀತ್‌ ಸಿಂಗ್‌ ಕುಲಾರ್‌ ಅವ​ರಿಗೆ ಅವ​ಕಾಶ ನೀಡ​ಲಾ​ಗಿದೆ.

ಫಾರ್ವರ್ಡ್‌ ಆಟ​ಗಾ​ರ​ರಾದ ಆಕಾ​ಶ್‌​ದೀಪ್‌ ಸಿಂಗ್‌, ರಮ​ಣ​ದೀಪ್‌ ಅವ​ರಿಗೂ ವಿಶ್ರಾಂತಿ ನೀಡ​ಲಾ​ಗಿದ್ದು, ಅವ​ರಿ​ಬ್ಬರ ಬದ​ಲಿಗೆ ತಲ್ವಿಂದ​ರ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾ​ಧ್ಯಾಯ್‌ ಅವ​ರಿಗೆ ಅವ​ಕಾಶ ನೀಡ​ಲಾ​ಗಿದೆ. ಇವರ ಜತೆ​ಯಲ್ಲಿ ಯವ ಗೋಲ್‌ ಕೀಪರ್‌ ಆಕಾಶ್‌ ಚಿಕ್ಟೆಅವ​ರಿಗೆ ತಂಡದ 2ನೇ ಗೋಲ್‌ ಕೀಪರ್‌ ಸ್ಥಾನ ಲಭಿ​ಸಿದೆ.

ದೀರ್ಘಾ​ವ​ಧಿಯ ನಂತರ ಬೀರೇಂದ್ರ ಸಿಂಗ್‌ ಲಾಕ್ರಾ ಅವ​ರಿಗೆ ತಂಡಕ್ಕೆ ಅವ​ಕಾಶ ನೀಡ​ಲಾ​ಗಿದೆ. ಮೊಣ​ಕಾಲು ಗಾಯ​ದಿಂದಾಗಿ ಲಾಕ್ರಾ ಅವರು, ರಿಯೊ ಒಲಿಂಪಿ​ಕ್ಸ್‌ಗೆ ಅಲ​ಭ್ಯ​ರಾ​ಗಿ​ದ್ದರು.

ತಂಡ ಇಂತಿದೆ

ಗೋಲ್‌ಕೀಪ​​ರ್‍ಸ್: ಪಿ.ಆರ್‌. ಶ್ರೀಜೇಶ್‌ (ನಾ​ಯ​ಕ), ಆಕಾಶ್‌ ಚಿಕ್ಟೆ; ಡಿಫೆಂಡ​​ರ್‍ಸ್: ರೂಪಿಂದರ್‌ ಪಾಲ್‌ ಸಿಂಗ್‌, ಪ್ರದೀಪ್‌ ಮೋರ್‌, ಜಸ್‌​ಪ್ರೀತ್‌ ಸಿಂಗ್‌ ಕುಲಾರ್‌, ಬೀರೇಂದ್ರ ಲಾಕ್ರಾ, ಕೊಠಾ​ಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌; ಮಿಡ್‌​ಫೀ​ಲ್ಡ​​ರ್‍ಸ್: ಚಿಂಗ್ಲೇ​ಸಾನಾ ಸಿಂಗ್‌ ಕಂಗು​ಜಾಮ್‌, ಸರ್ದಾರ್‌ ಸಿಂಗ್‌, ಮನ್‌​ಪ್ರೀತ್‌ ಸಿಂಗ್‌, ಎಸ್‌.ಕೆ. ಉತ್ತಪ್ಪ, ದೇವೀಂದರ್‌ ವಾಲ್ಮೀಕಿ; ಫಾರ್ವ​ರ್ಡ್ಸ್: ತಲ್ವಿಂದರ್‌ ಸಿಂಗ್‌, ಎಸ್‌.ವಿ. ಸುನಿಲ್‌, ಲಲಿತ್‌ ಕುಮಾರ್‌ ಉಪಾ​ಧ್ಯಾಯ್‌, ನಿಕ್ಕಿನ್‌ ತಿಮ್ಮಯ್ಯ, ಅಫ್ಫಾನ್‌ ಯೂಸುಫ್‌.