ಯುವರಾಜ್ ಮಾದಕ ದ್ರವ್ಯವಾದ ಮರಿಜುವಾನಾ ಸೇವಿಸಲಿದ್ದು, ಅವರ ಕುಟುಂಬದವರು ಸಹ ಸೇವಿಸುತ್ತಾರೆ.
ನವದೆಹಲಿ(ನ.1): ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಮಾದಕ ದ್ರವ್ಯ ಸೇವನೆ ಮಾಡುತ್ತಾರಂತೆ ಈಗಂತ ಆರೋಪ ಮಾಡಿದವರು ಯುವರಾಜ್ ಸಿಂಗ್ ಸೋದರ ಜೊರಾವರ್ ಪತ್ನಿ ಆಕಾಂಕ್ಷಾ ಶರ್ಮಾ. ಸದ್ಯ ಜೋರಾವರ್ ಹಾಗೂ ಆಕಾಂಕ್ಷ ಒಟ್ಟಿಗಿಲ್ಲ.ಬಿಗ್ ಬಾಸ್ ಮನೆಯಲ್ಲಿದ್ದಾಗ ಆಕಾಂಕ್ಷ ಯುವರಾಜ್ ಮತ್ತು ಅವರ ಕುಟುಂಬದ ವಿರುದ್ಧ ತೀರ್ವ ವಾಗ್ದಾಳಿ ನಡೆಸಿದ್ದರು.
ಬಿಗ್'ಬಾಸ್ ಮನೆಯಿಂದ ಹೊರಬಿದ್ದ ಮೇಲೆ ನೀಡಿದ ಸಂದರ್ಶನದಲ್ಲಿ, ಯುವರಾಜ್ ಮಾದಕ ದ್ರವ್ಯವಾದ ಮರಿಜುವಾನಾ ಸೇವಿಸಲಿದ್ದು, ಅವರ ಕುಟುಂಬದವರು ಸಹ ಸೇವಿಸುತ್ತಾರೆ. ನಾನು ಸಹ ನನ್ನ ಪತಿಯೊಂದಿಗೆ ಅದನ್ನು ಸೇವಿಸಿದ್ದೇನೆ. ನಾನು ಕೂಡ ಅದನ್ನು ಸೇವಿಸುತ್ತೇನೆಂದು ಯುವರಾಜ್ ಹೇಳಿಕೊಂಡಿದ್ದು, ಅದಲ್ಲದೆ ಇದೆಲ್ಲ ಸಹಜ ಎಂದಿದ್ದರು. ಯುವಿ ತಾಯಿ ಶಬ್ನಮ್ ತಮ್ಮ ಮಗನನ್ನು ಸಮರ್ಥಿಸಿಕೊಳ್ಳುವುದಕ್ಕೆ ಏನಾದರೊಂದನ್ನು ಹೇಳಬೇಕಷ್ಟೇ ಎಂದು ಆಕಾಂಕ್ಷಾ ಹೇಳಿದ್ದಾರೆ.
