Asianet Suvarna News Asianet Suvarna News

ಪಾಂಟಿಂಗ್ ಆಕ್ರಮಣಕಾರಿ, ದ್ರಾವಿಡ್'ರದ್ದು ವಿರೋಧ ನೀತಿ : ಸ್ಫೋಟಕ ಆಟಗಾರ ಬಿಚ್ಚಿಟ್ಟ ಸತ್ಯ

ನಮ್ಮೊಂದಿಗೆ ಮಾತುಕತೆ ಆರಂಭಿಸಿದ ಮೊದಲ ದಿನವೆ ಅವರ ಮಾತು ನಮ್ಮನ್ನು ರೋಮಾಂಚನಗೊಳಿಸಿತು. ಅವರ ಮನಸ್ಸಿನ ಭಾವನೆ ಸ್ವಾಭಾವಿಕವಾಗಿ ಗೆಲ್ಲುವುದಾಗಿರುತ್ತದೆ

Pontings speech gave goosebumps to Shreyas Iyer

ನವದೆಹಲಿ(ಏ.03): ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಕದನ ರಂಗೇರಲಿದೆ. ಎಲ್ಲ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ.

ಈ ನಡುವೆ ಡೇರ್'ಡೇವಿಲ್ ತಂಡದ ಕೋಚ್ ರಿಕಿ ಪಾಂಟಿಂಗ್ ಅವರ ಅದ್ಭುತ ಮಾತುಗಳಿಂದ ತಂಡದ ಸ್ಫೋಟಕ ಆಟಗಾರ ಶ್ರೇಯಸ್ ಅಯ್ಯರ್ ರೋಮಾಂಚನಗೊಂಡಿದ್ದಾರೆ. ಇತ್ತೀಚಿಗೆ ತಂಡದೊಂದಿಗೆ ನಡೆಸಿದ ಮಾತು ಇತರ ಆಟಗಾರರಿಗಿಂತ ಬಲಗೈ ಬ್ಯಾಟ್ಸ್'ಮೆನ್  ಶ್ರೇಯಸ್  ಹೆಚ್ಚು ಪುಳಕಿತರಾಗಿದ್ದಾರೆ.

'ಪಾಂಟಿಂಗ್ ಅವರು ತುಂಬಾ ಆಕ್ರಮಣಕಾರಿ ಮನೋಭಾವನೆಯನ್ನು ಹೊಂದಿದ್ದರೂ ಮನಸ್ಸು ಮಾತ್ರ ಸಕಾರಾತ್ಮಕವಾಗಿರುತ್ತದೆ. ನಮ್ಮೊಂದಿಗೆ ಮಾತುಕತೆ ಆರಂಭಿಸಿದ ಮೊದಲ ದಿನವೆ ಅವರ ಮಾತು ನಮ್ಮನ್ನು ರೋಮಾಂಚನಗೊಳಿಸಿತು. ಅವರ ಮನಸ್ಸಿನ ಭಾವನೆ ಸ್ವಾಭಾವಿಕವಾಗಿ ಗೆಲ್ಲುವುದಾಗಿರುತ್ತದೆ. ನಾವೆಲ್ಲರೂ ತಂಡದ ಕಾರ್ಯ ಪ್ರವೃತ್ತಿಯ ಬಗ್ಗೆ ಅವರೊಂದಿಗೆ ಬಹಳಷ್ಟು ಮಾತಾನಾಡುತ್ತೇವೆ. ಅವರು ಮಾತನಾಡಲು ಬಂದಾಗ ಒಂದು ರೀತಿಯ ಉದ್ದೇಶದ ಮನಸ್ಥಿತಿಯನ್ನು ಮಾತ್ರ ಹೊಂದಿರುತ್ತಾರೆ. ಅದು ಗೆಲ್ಲುವುದಾಗಿರುತ್ತದೆ. ಅವರ ಮಾರ್ಗದರ್ಶನದಲ್ಲಿ ಹಲವು ವಿಷಯಗಳನ್ನು ತಿಳಿದುಕೊಂಡಿದ್ದೇವೆ' ಎಂದು ಪಾಂಟಿಂಗ್ ಬಗ್ಗೆ ಮಾತುಗಳನ್ನು ಬಿಚ್ಚಿಟ್ಟರು.

ಆದರೆ ದ್ರಾವಿಡ್ ಮನಸ್ಥತಿ ಆಗಲ್ಲ. ಅವರು ಶಾಂತ ಸ್ವಭಾವದವರು. ಅವರು ಮನೋಭಾವನೆಗಳೆಲ್ಲವೂ ಮಕ್ಕಳನ್ನು ಪೋಷಿಸಿಕೊಂಡು ಹೋಗುವ ರೀತಿ ಇರುತ್ತದೆ. ಆದರೆ ಪಾಂಟಿಂಗ್ ಆ ರೀತಿ ಅಲ್ಲ. ಇದಕ್ಕೆ ತದ್ವಿರುದ್ಧವಾದ ನಿಲುವು ಅವರದು. ಆದರೆ ಜಾಗೃತಿಗೊಳಿಸುವ ಮನಸ್ಸಿನ ರೀತಿ ಇಬ್ಬರದು ಒಂದೇ' ಎಂದು ಇಬ್ಬರ ನಿಲುವನ್ನು ತಿಳಿಸಿದರು.

ಹೊಸ ನಾಯಕ ಗೌತಮ್ ಗಂಭೀರ್ ಅವರನ್ನು ಹೊಂದಿರುವ ಡೆಲ್ಲಿ ಡೇರ್ ಡೇವಿಲ್ ತಂಡ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ಹೊಂದಿದೆ.

Pontings speech gave goosebumps to Shreyas Iyer

Follow Us:
Download App:
  • android
  • ios