ಏಷ್ಯಾಡ್ ಪದಕ ವಿಜೇತರಿಗೆ ಮೋದಿ ಅಭಿನಂದನೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 9:42 AM IST
PM congratulates Asiad medal winners
Highlights

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ‘ಕ್ರೀಡಾಪಟುಗಳ ಸಾಧನೆ ದೇಶದ ಘನತೆ ಮತ್ತು ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ. ಕ್ರೀಡಾಪಟುಗಳು ಜನಪ್ರಿಯತೆ ಮತ್ತು ಶ್ಲಾಘನೆಗಳಿಂದ ವಿಚಲಿತರಾಗಬಾರದು’ ಎಂದರು. ‘ಕ್ರೀಡಾಪಟುಗಳು ತಮ್ಮ ಪ್ರದರ್ಶನ ಉತ್ತಮ ಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರ ಜತೆಗೆ ವಿಶ್ವದ ಶ್ರೇಷ್ಠ ಕ್ರೀಡಾ ಸಾಧಕರ ಕಾರ್ಯಕ್ಷಮತೆ ಬಗ್ಗೆ ವಿಶ್ಲೇಷಣೆ ಮಾಡಬೇಕು. ಈ ಮೂಲಕ ತಮ್ಮ ಪ್ರದರ್ಶನವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಕಿವಿಮಾತು ಹೇಳಿದರು.

ನವದೆಹಲಿ[ಸೆ.06]: ಇತ್ತೀಚೆಗಷ್ಟೇ ಮುಕ್ತಾಯಗೊಂಡ 18ನೇ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ವಿಜೇತರಿಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಬುಧವಾರ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಅವರೊಂದಿಗೆ ಸಂವಾದ ನಡೆಸಿದ ಮೋದಿ, ಏಷ್ಯಾಡ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ, ದಾಖಲೆ ಪದಕ ಜಯಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ‘ಕ್ರೀಡಾಪಟುಗಳ ಸಾಧನೆ ದೇಶದ ಘನತೆ ಮತ್ತು ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ. ಕ್ರೀಡಾಪಟುಗಳು ಜನಪ್ರಿಯತೆ ಮತ್ತು ಶ್ಲಾಘನೆಗಳಿಂದ ವಿಚಲಿತರಾಗಬಾರದು’ ಎಂದರು. ‘ಕ್ರೀಡಾಪಟುಗಳು ತಮ್ಮ ಪ್ರದರ್ಶನ ಉತ್ತಮ ಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇದರ ಜತೆಗೆ ವಿಶ್ವದ ಶ್ರೇಷ್ಠ ಕ್ರೀಡಾ ಸಾಧಕರ ಕಾರ್ಯಕ್ಷಮತೆ ಬಗ್ಗೆ ವಿಶ್ಲೇಷಣೆ ಮಾಡಬೇಕು. ಈ ಮೂಲಕ ತಮ್ಮ ಪ್ರದರ್ಶನವನ್ನು ಮತ್ತಷ್ಟು ಮೇಲ್ದರ್ಜೆಗೇರಿಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಸಣ್ಣ ಪಟ್ಟಣ, ಗ್ರಾಮೀಣ ಪ್ರದೇಶ, ಬಡತನದ ಹಿನ್ನೆಲೆಯಿಂದ ಬಂದವರು ಇಂದು ದೇಶಕ್ಕಾಗಿ ಪದಕ ಜಯಿಸುತ್ತಿರುದ್ದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದರು. ಇದು ಗ್ರಾಮೀಣ ಭಾರತದ ಸಾಮರ್ಥ್ಯ. ಕ್ರೀಡಾಪಟುಗಳ ಹೋರಾಟ, ಅವರು ಸಾಗಿಬಂದ ಕಷ್ಟದ ಹಾದಿ ಕುರಿತು ಜಗತ್ತಿಗೆ ತಿಳಿದಿರುವುದಿಲ್ಲ ಎಂದು ಮೋದಿ ಹೇಳಿದರು’ ಎಂದು ಪ್ರಧಾನಮಂತ್ರಿಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ‘ಪದಕ ವಿಜೇತರ ನಿಜವಾದ ಸವಾಲು ಇದೀಗ ಆರಂಭವಾಗಿದೆ. ಒಲಿಂಪಿಕ್ಸ್ ಕೂಟದಲ್ಲಿ ಪದಕ ಗೆಲ್ಲುವ ತನಕ ಯಾವೊಬ್ಬ ಕ್ರೀಡಾಪಟುಗಳು ಮಿಶ್ರಮಿಸಬಾರದು’ ಎಂದು ಮೋದಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿದರು ಎಂದು ಹೇಳಿದೆ.

loader