ಭಾರತ ತಂಡದ ಕೋಚ್ ಲೂಯಿಸ್ ನಾರ್ಟನ್ ಡೆ ಮಟೋಸ್ ತಂಡದಲ್ಲಿನ 27 ಆಟಗಾರರಲ್ಲಿ ನಾಲ್ವರು ಆಟಗಾರರನ್ನು ನಾಯಕರನ್ನಾಗಿ ನೇಮಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು.

ಪಣಜಿ(ಸೆ.19): ಇದೇ ಅ. 6ರಿಂದ ಆರಂಭವಾಗಲಿರುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಮಿಡ್ ಫೀಲ್ಡರ್ ಅಮರ್‌'ಜಿತ್ ಸಿಂಗ್ ಮುನ್ನಡೆಸಲಿದ್ದಾರೆ.

Add Asianetnews Kannada as a Preferred SourcegooglePreferred

ಭಾರತ ತಂಡದ ಕೋಚ್ ಲೂಯಿಸ್ ನಾರ್ಟನ್ ಡೆ ಮಟೋಸ್ ತಂಡದಲ್ಲಿನ 27 ಆಟಗಾರರಲ್ಲಿ ನಾಲ್ವರು ಆಟಗಾರರನ್ನು ನಾಯಕರನ್ನಾಗಿ ನೇಮಿಸಬಹುದು ಎಂದು ಅಭಿಪ್ರಾಯಪಟ್ಟಿದ್ದರು. ತಂಡದಲ್ಲಿನ ಎಲ್ಲ ಆಟಗಾರರು ಅಮರ್‌'ಜಿತ್ ಅವರಿಗೆ ಮತ ಚಲಾಯಿಸುವ ಮೂಲಕ ಆಯ್ಕೆ ಮಾಡಲಾಯಿತು. ಎರಡನೇ ಸ್ಥಾನ ಪಡೆದ ಜಿತೇಂದರ್ ಸಿಂಗ್ ಉಪನಾಯಕರಾಗಿದ್ದಾರೆ.

ಇನ್ನು 16 ವರ್ಷದೊಳಗಿನ ಎಎಫ್‌'ಸಿ ಚಾಂಪಿಯನ್‌'ಶಿಪ್‌'ನಲ್ಲಿ ಭಾರತ ತಂಡದ ನಾಯಕರಾಗಿದ್ದ ಸುರೇಶ್ ಸಿಂಗ್ 3ನೇ ಸ್ಥಾನ ಪಡೆದಿದ್ದರೆ, ಡಿಫೆಂಡರ್ ಸಂಜೀವ್ ಸ್ಟಾಲೀನ್ 4ನೇ ಸ್ಥಾನ ಪಡೆದರು.