ಅಹ್ಮದಾಬಾದ್‌[ಆ.16]: ಪ್ರೊ ಕಬಡ್ಡಿ ಲೀಗ್ 7ನೇ ಆವೃತ್ತಿಯಲ್ಲಿ ಜೈಪುರ ಪಿಂಕ್‌ ಪ್ಯಾಂಥ​ರ್ಸ್ ಯಶಸ್ಸಿನ ಓಟ ಮುಂದುವರಿದಿದೆ. 

ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ಪ್ರಕಟ!

ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ನಾಯಕ ದೀಪಕ್‌ ಹೂಡಾ (09 ರೈಡ್‌ ಅಂಕ) ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಜೈಪುರ, ಪುಣೇರಿ ಪಲ್ಟನ್‌ ವಿರುದ್ಧ 33-25 ಅಂಕಗಳಲ್ಲಿ ಗೆಲುವು ಸಾಧಿಸಿತು. ಈ ಜಯದೊಂದಿಗೆ ಜೈಪುರ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. 

ಇನ್ನೂ ಮುಗಿದಿಲ್ಲ ಅಂತಾರಾಷ್ಟ್ರೀಯ ಕರಿಯರ್ , ಪ್ರತಿಕ್ರಿಯೆ ನೀಡಿದ ಗೇಲ್!

ಮೊದಲಾರ್ಧದ ಮುಕ್ತಾಯಕ್ಕೆ 17-11ರ ಮುನ್ನಡೆ ಸಾಧಿಸಿದ್ದ ಪಿಂಕ್‌ ಪ್ಯಾಂಥ​ರ್ಸ್, ದ್ವಿತೀಯಾರ್ಧದಲ್ಲೂ ಆಕ್ರಮಣಕಾರಿ ಆಟವಾಡಿತು. ಪಂದ್ಯದಲ್ಲಿ 2 ಬಾರಿ ಪುಣೆ ಆಲೌಟ್‌ ಮಾಡಿ, 8 ಅಂಕಗಳ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿತು. ದಿಗ್ಗಜ ಆಟಗಾರ ಅನೂಪ್‌ ಕುಮಾರ್‌ ಮಾರ್ಗದರ್ಶನದ ಪುಣೆಗಿದು ಟೂರ್ನಿಯಲ್ಲಿ 5ನೇ ಸೋಲಾಗಿದ್ದು, ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲೇ ಉಳಿದಿದೆ.

ಇಂದಿನ ಪಂದ್ಯಗಳು: 
ಮುಂಬಾ-ಪಾಟ್ನಾ, ಸಂಜೆ 7.30ಕ್ಕೆ, 
ಗುಜರಾತ್‌-ಜೈಪುರ, ರಾತ್ರಿ 8.30ಕ್ಕೆ