ಚೆನ್ನೈ(ಆ.24): ಪ್ರೊ ಕಬಡ್ಡಿ 7ನೇ ಆವೃ​ತ್ತಿ​ಯಲ್ಲಿ ಸತತ 6 ಸೋಲು​ಗ​ಳಿಂದ ಕಂಗೆ​ಟ್ಟಿದ್ದ 2 ಬಾರಿ ರನ್ನರ್‌-ಅಪ್‌ ಗುಜ​ರಾತ್‌ ಫಾರ್ಚೂನ್‌ಜೈಂಟ್ಸ್‌, ಕೊನೆಗೂ ಗೆಲು​ವಿನ ಸಿಹಿ​ಯುಂಡಿದೆ. ಶುಕ್ರ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ 3 ಬಾರಿ ಚಾಂಪಿ​ಯನ್‌ ಪಾಟ್ನಾ ಪೈರೇಟ್ಸ್‌ ವಿರು​ದ್ಧ 29-26 ಅಂಕ​ಗಳ ರೋಚಕ ಗೆಲುವು ಸಾಧಿ​ಸಿತು. ಪಾಟ್ನಾ​ಗಿದು ಈ ಆವೃ​ತ್ತಿ​ಯಲ್ಲಿ 7ನೇ ಸೋಲಾ​ಗಿದ್ದು, ತಂಡ ಪ್ಲೇ-ಆಫ್‌ಗೇರು​ವುದು ಅನು​ಮಾನ ಎನಿ​ಸು​ತ್ತಿದೆ. ಮೊದಲಾ​ರ್ಧದ ಮುಕ್ತಾ​ಯಕ್ಕೆ 15-11ರಿಂದ ಮುಂದಿದ್ದ ಪಾಟ್ನಾ, ದ್ವಿತೀ​ಯಾ​ರ್ಧ​ದಲ್ಲಿ ಮಂಕಾ​ಯಿತು. ನಾಯಕ ಪ್ರದೀಪ್‌(09) ಅಂಕ ಗಳಿ​ಸಿ​ದರೂ ಪಾಟ್ನಾ ಗೆಲ್ಲ​ಲಿಲ್ಲ. ರೋಹಿತ್‌ (10 ಅಂಕ) ಗುಜ​ರಾತ್‌ ಗೆಲು​ವಿಗೆ ನೆರ​ವಾ​ದರು.

ಇದನ್ನೂ ಓದಿ: ಬೆಂಗಳೂರು ಬುಲ್ಸ್ ತಂಡದಲ್ಲಿ ಬಾಕಿ ಹಗರಣ; ಮಾಲೀಕರ ವಿರುದ್ಧ ಅಸಮಧಾನ!

ಮುಂಬಾಗೆ ಭರ್ಜರಿ ಜಯ
ಶುಕ್ರ​ವಾರ ನಡೆದ 2ನೇ ಪಂದ್ಯ​ದಲ್ಲಿ ತಮಿಳ್‌ ತಲೈ​ವಾಸ್‌ ವಿರುದ್ಧ ಯು ಮುಂಬಾ 00-00 ಅಂತ​ರ​ದಲ್ಲಿ ಗೆಲುವು ಸಾಧಿ​ಸಿತು. ಈ ಗೆಲು​ವಿ​ನೊಂದಿಗೆ ಮುಂಬಾ ಅಂಕ​ಪ​ಟ್ಟಿ​ಯಲ್ಲಿ 4ನೇ ಸ್ಥಾನ​ಕ್ಕೇ​ರಿತು. ತವ​ರಿನ ಚರಣವನ್ನು ತಲೈ​ವಾಸ್‌ ಒಂದೂ ಗೆಲುವು ಕಾಣದೆ ಮುಕ್ತಾ​ಯ​ಗೊ​ಳಿ​ಸಿತು. ಆಡಿದ 4 ಪಂದ್ಯ​ಗ​ಳಲ್ಲಿ 3ರಲ್ಲಿ ಸೋತರೆ ಮತ್ತೊಂದು ಪಂದ್ಯ ಟೈ ಆಗಿತ್ತು. ಶನಿ​ವಾರದಿಂದ ದೆಹಲಿ ಚರಣ ಆರಂಭ​ಗೊ​ಳ್ಳ​ಲಿದ್ದು, ದಬಾಂಗ್‌ ಡೆಲ್ಲಿ ತಂಡ ತನ್ನ ತವ​ರಿನ ಪಂದ್ಯ​ಗ​ಳನ್ನು ಆಡ​ಲಿದೆ.