ಇಂದು ಪಿಂಕ್ ಒನ್'ಡೇ; ಮತ್ತೆ ಆರ್ಭಟಿಸುತ್ತಾರಾ ಎಬಿಡಿ..?

First Published 10, Feb 2018, 3:31 PM IST
Pink ODI AB De Villiers and Wanderers to Combine Again to Stop the Indian Juggernaut
Highlights

ಇನ್ನು ಪಿಂಕ್ ಒನ್'ಡೇ ಪಂದ್ಯಗಳಲ್ಲಿ ಎಬಿ ಡಿವಿಲಿಯರ್ಸ್‌'ರಿಂದ ವಿಸ್ಫೋಟಕ ಆಟ ಮೂಡಿಬಂದಿದೆ. 2015ರಲ್ಲಿ ವಿಂಡೀಸ್ ವಿರುದ್ಧ ಕೇವಲ 44 ಎಸೆತಗಳಲ್ಲಿ 149 ರನ್ ಚಚ್ಚಿದ್ದ ವಿಲಿಯರ್ಸ್‌, 2013ರಲ್ಲಿ ಭಾರತ ವಿರುದ್ಧ ಪಿಂಕ್ ಒನ್ ಡೇಯಲ್ಲಿ 47 ಎಸೆತಗಳಲ್ಲಿ 77 ರನ್ ಗಳಿಸಿದ್ದರು.

ಜೊಹಾನ್ಸ್'ಬರ್ಗ್(ಫೆ.10): 2011ರಿಂದ ದ.ಆಫ್ರಿಕಾ ತವರಿನ ಋತುವಿನಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಹಾಗೂ ಸಂತ್ರಸ್ತರ ನೆರವಿಗಾಗಿ ‘ಪಿಂಕ್ ಒನ್‌ಡೇ’ಯನ್ನು ನಡೆಸುತ್ತಿದೆ. ಇಂದಿನ ಪಂದ್ಯದಲ್ಲಿ ಆಫ್ರಿಕಾ ಆಟಗಾರರು ಗುಲಾಬಿ ಬಣ್ಣದ ಉಡುಗೆ ತೊಟ್ಟು ಆಡಲಿದ್ದಾರೆ.

ವಿಶೇಷ ಎಂದರೆ ಪಿಂಕ್ ಒನ್‌ಡೇ ಆಡಿದಾಗಲೆಲ್ಲಾ ದ.ಆಫ್ರಿಕಾ ಗೆಲುವು ಸಾಧಿಸಿದೆ. ಇದುವರೆಗೆ 6 ಪಿಂಕ್ ಒನ್'ಡೇ ಪಂದ್ಯಗಳನ್ನಾಡಿರುವ ದಕ್ಷಿಣ ಆಫ್ರಿಕಾ ಆರು ಪಂದ್ಯಗಳಲ್ಲೂ ಜಯದ ಸಿಹಿಯುಂಡಿದೆ. ಇದೀಗ ಭಾರತ ವಿರುದ್ಧದ ಸರಣೀಯಲ್ಲಿ 3-0 ಹಿನ್ನಡೆ ಅನುಭವಿಸಿ ಒತ್ತಡದಲ್ಲಿರು ಆಫ್ರಿಕಾ ಪುಟಿದೇಳುವುದೇ ಎನ್ನುವುದನ್ನು ಕಾದು ನೋಡಬೇಕಿದೆ.

loader