ಪ್ರಸ್ತುತ ಐಸಿಸಿ ನಿಯಮದಂತೆ 'ಬಿಗ್ ತ್ರಿ' ರಾಷ್ಟ್ರಗಳೆನಿಕೊಂಡಿರುವ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬರುವ ಆದಾಯದಲ್ಲಿ ಸಿಂಹಪಾಲು ಪಡೆಯುತ್ತಿವೆ.

ಕರಾಚಿ(ಏ.23): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಹಣಕಾಸು ಹಂಚಿಕೆ​ಯಲ್ಲಿ ‘ಬಿಗ್‌ ತ್ರಿ' ಮಾದರಿ ಮೂಲಕ ಸಿಂಹಪಾಲು ಪಡೆಯುತ್ತಿರುವ ಬಿಸಿಸಿಐ ನಿಲುವನ್ನು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಖಂಡಿಸಿದ್ದು, ಇದೇ 24ರಂದು ನಡೆಯಲಿರುವ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕರ ಸಮಿತಿ ಸಭೆಯಲ್ಲಿ ಪ್ರಬಲ ವಿರೋಧ ವ್ಯಕ್ತಪಡಿಸಲು ಮುಂದಾಗಿದೆ.

‘‘ನಾವು ‘ಬಿಗ್‌ ತ್ರಿ' ಮಾದರಿಯನ್ನು ಸದಾ ವಿರೋಧಿಸುತ್ತಲೇ ಬಂದಿ​ದ್ದೇವೆ. ಭಾರತ ದ್ವಿಪಕ್ಷೀಯ ಸರಣಿಯನ್ನು ರದ್ದು​ಗೊಳಿಸಿದ್ದರಿಂದ ನಮಗೆ ಅಪಾರ ನಷ್ಟವಾಗಿದೆ. ಈ ಬಾರಿಯೂ ಬಿಸಿಸಿಐ ಹಣಕಾಸು ಹಂಚಿಕೆಯಲ್ಲಿ ಬಹುಪಾಲು ಪಡೆಯಲು ಮುಂದಾದರೆ ಅದನ್ನು ನಾವು ಒಪ್ಪುವುದಿಲ್ಲ'' ಎಂದು ಪಿಸಿಬಿ ಮುಖ್ಯಸ್ಥ ಶಹರ್ಯಾರ್‌ ಖಾನ್‌ ಹೇಳಿದ್ದಾರೆ. 

ಪ್ರಸ್ತುತ ಐಸಿಸಿ ನಿಯಮದಂತೆ 'ಬಿಗ್ ತ್ರಿ' ರಾಷ್ಟ್ರಗಳೆನಿಕೊಂಡಿರುವ ಭಾರತ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಬರುವ ಆದಾಯದಲ್ಲಿ ಸಿಂಹಪಾಲು ಪಡೆಯುತ್ತಿವೆ.