Asianet Suvarna News Asianet Suvarna News

ಅನುರಾಗ್ ವಿರುದ್ಧ ಪಿಸಿಬಿ ಖಂಡನಾ ನಿರ್ಣಯ..?

ಇತ್ತೀಚೆಗೆ, ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಎರಡೂ ದೇಶಗಳ ನಡುವಿನ ಕ್ರಿಕೆಟ್ ಸರಣಿಗಳ ಬಗ್ಗೆ ಹೇಳಿಕೆ ನೀಡಿದ್ದ ಠಾಕೂರ್, ಪಾಕಿಸ್ತಾನ ವಿರುದ್ಧ ಟೀಕಾಸ ಪ್ರಯೋಗಿಸಿದ್ದರು. ಐಸಿಸಿಯ ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೊಬ್ಬರು ಮತ್ತೊಂದು ಸದಸ್ಯ ರಾಷ್ಟ್ರದ ವಿರುದ್ಧ ಮಾತನಾಡುವುದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆಯೆಂದು ಹೇಳಿರುವ ಪಿಸಿಬಿ, ಐಸಿಸಿ ಮಹಾವೇಶದಲ್ಲೇ ಠಾಕೂರ್‌ಗೆ ಇರುಸು ಮುರುಸು ಉಂಟು ಮಾಡಲು ನಿರ್ಧರಿಸಿದೆ.

PCB seeks to censure BCCI President Anurag Thakur

ಕರಾಚಿ(ಅ.11): ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್‌ಟೌನ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ (ಐಸಿಸಿ) ಮಹಾವೇಶನದಲ್ಲಿ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಅನುರಾಗ್ ಠಾಕೂರ್ ವಿರುದ್ಧ ಖಂಡನಾ ನಿರ್ಣಯ ಮಂಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಿದ್ಧತೆ ನಡೆಸಿದೆ.

ಇತ್ತೀಚೆಗೆ, ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧಗಳು ಹಾಗೂ ಎರಡೂ ದೇಶಗಳ ನಡುವಿನ ಕ್ರಿಕೆಟ್ ಸರಣಿಗಳ ಬಗ್ಗೆ ಹೇಳಿಕೆ ನೀಡಿದ್ದ ಠಾಕೂರ್, ಪಾಕಿಸ್ತಾನ ವಿರುದ್ಧ ಟೀಕಾಸ ಪ್ರಯೋಗಿಸಿದ್ದರು. ಐಸಿಸಿಯ ಸದಸ್ಯ ರಾಷ್ಟ್ರಗಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೊಬ್ಬರು ಮತ್ತೊಂದು ಸದಸ್ಯ ರಾಷ್ಟ್ರದ ವಿರುದ್ಧ ಮಾತನಾಡುವುದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದೆಯೆಂದು ಹೇಳಿರುವ ಪಿಸಿಬಿ, ಐಸಿಸಿ ಮಹಾವೇಶದಲ್ಲೇ ಠಾಕೂರ್‌ಗೆ ಇರುಸು ಮುರುಸು ಉಂಟು ಮಾಡಲು ನಿರ್ಧರಿಸಿದೆ.

ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ಇತ್ತೀಚೆಗೆ ಹೃದಯ ಶಸ ಚಿಕಿತ್ಸೆಗೆ ಒಳಗಾಗಿದ್ದು ಐಸಿಸಿ ಸಭೆಯಲ್ಲಿ ಅವರು ಪಾಲ್ಗೊಳ್ಳುತ್ತಿಲ್ಲ. ಹಾಗಾಗಿ, ಪಿಸಿಬಿಯ ಮಹತ್ವದ ಕಾರ್ಯಕಾರಣಿ ಅಧ್ಯಕ್ಷರಾಗಿರುವ ಪಿಸಿಬಿ ಮಾಜಿ ಅಧ್ಯಕ್ಷರೂ ಆದ ನಿಜಾಮ್ ಸೇಥಿ ಸಾರಥ್ಯದಲ್ಲಿ ನಿಯೋಗವೊಂದು ಐಸಿಸಿ ಸಭೆಗೆ ತೆರಳಿದೆ. ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾಕಾರಿ ಸುಬಾನ್ ಅಹ್ಮದ್ ಸಹ ಈ ನಿಯೋಗದಲ್ಲಿದ್ದಾರೆ. ಕೇಪ್‌ಟೌನ್‌ಗೆ ತೆರಳುವ ಮುನ್ನ ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೇಥಿ, ಪಾಕಿಸ್ತಾನ ವಿರುದ್ಧ ತಾವು ನೀಡಿರುವ ಅವಹೇಳನಾಕಾರಿ ಹೇಳಿಕೆಗಳ ವಿರುದ್ಧ ಅನುರಾಗ್ ಠಾಕೂರ್ ಐಸಿಸಿ ಸಭೆಯಲ್ಲಿ ಸ್ಪಷ್ಟನೆ ನೀಡವಂತೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ

Follow Us:
Download App:
  • android
  • ios