ಕರಾ​ಚಿ(ಸೆ.29): ಭಾರ​ತ- ಪಾಕಿ​ಸ್ತಾನ ನಡು​ವಣ 2007ರಿಂದೀ​ಚೆಗೆ ಕ್ರಿಕೆಟ್‌ ಸರಣಿಯು ಸ್ಥಗಿ​ತ​ಗೊಂಡಿ​ರು​ವು​ದ​ರಿಂದ ತನಗೆ ಸುಮಾರು ರೂ. 668 ಕೋಟಿ ನಷ್ಟಉಂಟಾ​ಗಿದ್ದು ದ್ವಿಪಕ್ಷೀಯ ಸರಣಿ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಕೋರಿದೆ.

ಇನ್ನು ಭದ್ರತೆ ಕಾರಣಕ್ಕೆ ಬೇರೆ ರಾಷ್ಟ್ರಗಳು ತನ್ನ ನೆಲದಲ್ಲಿ ಕ್ರಿಕೆಟ್‌ ಆಡದ ಹಿನ್ನೆಲೆಯಲ್ಲಿ ಆದ ನಷ್ಟವನ್ನು ಭರಿಸಬೇಕೆಂದು ಐಸಿಸಿಯನ್ನು ಕೋರಿಲ್ಲ ಎಂದು ಕೂಡ ಪಿಸಿಬಿ ಸ್ಪಷ್ಟಪಡಿಸಿದೆ.

ಅಂದಹಾಗೆ ಪಿಸಿಬಿ ಅಧ್ಯಕ್ಷ ಶಹ​ರ್ಯಾರ್‌ ಖಾನ್‌, ಕೋಲ್ಕ​ತಾಕ್ಕೆ ಆಗ​ಮಿಸಿ ಅಂದಿನ ಬಿಸಿ​ಸಿ​ಐ ಅಧ್ಯಕ್ಷ ಜಗ​ಮೋ​ಹನ್‌ ದಾಲ್ಮಿಯಾ, ಉಪಾ​ಧ್ಯಕ್ಷ ಅರುಣ್‌ ಜೇಟ್ಲಿಯವ​ರನ್ನು ಭೇಟಿ​ಯಾಗಿ ಮನ​ವೊ​ಲಿ​ಸಲು ಯತ್ನಿ​ಸಿ​ದ್ದರಾದರೂ, ಆ ಯತ್ನಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ.