ನವದದೆಹಲಿ(ಆ.22): ಬಿಸಿಸಿಐ ಮುಂದಿನ ಟೂರ್ನಿಗಳ ಟೈಟಲ್ ಪ್ರಾಯೋಜಕತ್ವಕ್ಕೆ ನಡೆದ ಬಿಡ್‌ನಲ್ಲಿ ಪೆಟಿಎಂ ಒಪ್ಪಂದ ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಬಿಸಿಸಿಐನ ಟೈಟಲ್‌ ಪ್ರಾಯೋಜಕತ್ವವನ್ನು 2019​​-2023ರ ಅವಧಿಗೆ  326.80  ಕೋಟಿ ರೂಪಾಯಿಗೆ ಪೇಟಿಎಂ ಸಂಸ್ಥೆ ಉಳಿಸಿಕೊಂಡಿದೆ. 

ಇದನ್ನೂ ಓದಿ: ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ

ಭಾರತದಲ್ಲಿ ನಡೆಯಲಿರುವ ಪ್ರತಿ ಅಂತಾರಾಷ್ಟ್ರೀಯ ಹಾಗೂ ದೇಸಿ ಪಂದ್ಯಗಳಿಗೆ ಪೇಟಿಎಂ 3.80 ಕೋಟಿ ರೂಪಾಯಿ ಬಿಸಿಸಿಐಗೆ ಪಾವತಿಸಲಿದೆ. 2015ರಲ್ಲಿ ಬಿಸಿಸಿಐ ಟೈಟಲ್‌ ಪ್ರಾಯೋಜಕತ್ವ ಹಕ್ಕು ಪಡೆದಿದ್ದ ಪೇಟಿಎಂ, ಕಳೆದ 4 ವರ್ಷಗಳಲ್ಲಿ ಪ್ರತಿ ಪಂದ್ಯಕ್ಕೆ .2.4 ಕೋಟಿ ಪಾವತಿಸುತ್ತಿತ್ತು. ಆ ಮೊತ್ತಕ್ಕೆ ಹೋಲಿಸಿದರೆ ಶೇ.58ರಷ್ಟುಹೆಚ್ಚಳವಾಗಿದೆ. ಭಾರತ ತಂಡ, ರಣಜಿ ಸೇರದಿಂತೆ ಎಲ್ಲಾ ದೇಸಿ ಟೂರ್ನಿಗಳು ಪೇಟಿಎಂನಿಂದ ಪ್ರಾಯೋಜಕತ್ವ ಪಡೆಯಲಿವೆ.