ನವದೆಹಲಿ[ಆ.17]: ಸೆಪ್ಟೆಂಬರ್‌ 14ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ, ಬಿಸಿಸಿಐ ಚುನಾವಣೆಯಲ್ಲಿ ಮತ ಹಾಕುವ ಅಧಿಕಾರವಿರುವುದಿಲ್ಲ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಸಿಸಿಐ ಚುನಾವಣಾ ಅಧಿಕಾರಿ ಎನ್‌.ಗೋಪಾಲಸ್ವಾಮಿ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. 

ಸ್ವಹಿತಾಸಕ್ತಿಗೆ ದ್ರಾವಿಡ್‌ ಒಳಪಡಲ್ಲ: BCCI ಸ್ಪಷ್ಟನೆ

ಅ.22ಕ್ಕೆ ಬಿಸಿಸಿಐ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯ ಸಂಸ್ಥೆಗಳು ಚುನಾವಣಾ ಪ್ರಕ್ರಿಯೆ ಆರಂಭಿಸುವ ಮೊದಲು ನ್ಯಾ.ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಕಾನಗೊಳಿಸಬೇಕಿದೆ. 

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸೇರಿ 10 ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಇನ್ನೂ ಲೋಧಾ ಸಮಿತಿ ಶಿಫಾರಸುಗಳನ್ನು ಪಾಲಿಸುತ್ತಿಲ್ಲ.