31 ವರ್ಷದ ಟೀಂ ಇಂಡಿಯಾ ವೇಗಿ ದಿಢೀರ್ ಎಲ್ಲಾ ಮಾದರಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಭಾರತದ ಪರ ಟಿ20, ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಅದ್ಬುತ ಪ್ರದರ್ಶನ ನೀಡಿದ್ದ ಈ ಯುವ ವೇಗಿ ಅಚ್ಚರಿ ನಿರ್ಧಾರ ತೆಗೆದುಕೊಂಡಿದ್ದೇಕೆ? ಇಲ್ಲಿದೆ ವಿವರ.

ದೆಹಲಿ(ಜು.17): ಟೀಂ ಇಂಡಿಯಾ ಯುವ ಕ್ರಿಕೆಟಿಗರ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಟಾರ್ ಬೌಲರ್ ಆಗಿ ಮಿಂಚಿದ್ದ ಪರ್ವಿಂದರ್ ಅವಾನ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂಲಕ ಕೇವಲ 31ನೇ ವಯಸ್ಸಿಗೆ ವಿದಾಯ ಹೇಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಮಿಂಚಿನ ದಾಳಿ ಸಂಘಟಿಸಿದ ಪರ್ವಿಂದರ್ ಅವಾನ ಟೀಂ ಇಂಡಿಯಾಗೂ ಆಯ್ಕೆಯಾಗಿದ್ದರು. ಅವಾನ ಭಾರತದ ಪರ 2 ಟಿ20 ಪಂದ್ಯ ಆಡಿದ್ದಾರೆ. ಇಂಗ್ಲೆಂಡ್ ವಿರುದ್ಧ 2 ಟಿ20 ಪಂದ್ಯ ಆಡಿದ್ದ ಅವಾನ 12 ರನ್ ನೀಡಿ ವಿಕೆಟ್ ಕಬಳಿಸುವಲ್ಲಿ ವಿಫಲವಾಗಿದ್ದರು.

Scroll to load tweet…

ಪ್ರತಿಭಾನ್ವಿತ ವೇಗಿಯಾಗಿ ಗುರುತಿಸಿಕೊಂಡಿದ್ದ ಅವಾನಗೆ ಸೂಕ್ತ ಸಮಯದಲ್ಲಿ ಅವಕಾಶಗಳು ಸಿಗಲೇ ಇಲ್ಲ. ದೇಸಿ ಕ್ರಿಕೆಟ್‌ನಲ್ಲೂ ಅವಾನ ಮೂಲೆಗುಂಪಾದರು. ದೆಹಲಿ ಪರ 62 ಪ್ರಥಮ ದರ್ಜೆ ಪಂದ್ಯ ಆಡಿರುವ ಅವನಾ 191 ವಿಕೆಟ್ ಉರುಳಿಸಿದ್ದಾರೆ. 

ನಿವೃತ್ತಿ ನಿರ್ಧಾರವನ್ನ ಪರ್ವಿಂದರ್ ಅವನಾ ಟ್ವೀಟ್ ಮೂಲಕ ಬಹಿರಂಗ ಪಡಿಸಿದ್ದಾರೆ. ಹೆಚ್ಚಿನ ಅವಕಾಶಗಳ ಕೊರತೆಯಿಂದ ಅವಾನ ಕ್ರಿಕೆಟ್‌ನಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾಯಿತು. ಹೀಗಾಗಿ 31 ವರ್ಷದ ಅವಾನ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.