ಪ್ಯಾರಿಸ್ ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭಕ್ಕೆ ಡೇಟ್ ಫಿಕ್ಸ್

ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ.

Paris Olympics opening ceremony set to be sunset show on July 26 kvn

ಪ್ಯಾರಿಸ್(ಮಾ.09): ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಜುಲೈ 26ರಂದು ನಡೆಯಲಿದೆ ಎಂದು ಕ್ರೀಡಾಕೂಟದ ಆಯೋಜಕರು ತಿಳಿಸಿದ್ದಾರೆ. ಇದೇ ಮೊದಲ ಬಾರಿ ಕ್ರೀಡಾಂಗಣದ ಹೊರಗಡೆ ಉದ್ಘಾಟನಾ ಸಮಾರಂಭ ನೆರವೇರಲಿದೆ. .

ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಲಿದ್ದಾರೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ.

ಕಿರಿಯರ ಅಥ್ಲೆಟಿಕ್ಸ್‌: ಚಿನ್ನ ಗೆದ್ದ ಕರ್ನಾಟಕದ ಪವನಾ

ಲಖನೌ: 22ನೇ ರಾಷ್ಟ್ರೀಯ ಅಂಡರ್‌-20 ಫೆಡರೇಶನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಪವನಾ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಪವನಾ 6.01 ಮೀ. ದೂರಕ್ಕೆ ಜಿಗಿದು ಅಗ್ರಸ್ಥಾನಿಯಾದರು. ತಮಿಳುನಾಡಿನವರಾದ ಪ್ರತೀಕ್ಷಾ(5.77 ಮೀ.) ಹಾಗೂ ಲಕ್ಷನ್ಯ(5.75 ಮೀ.) ಕ್ರಮವಾಗಿ ಬೆಳ್ಳಿ, ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡರು.

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಸಾತ್ವಿಕ್‌-ಚಿರಾಗ್‌ ಎಂಟ್ರಿ

ರೈಲ್ವೇ ಮಾತೃ ಕಪ್‌ ಚಾಂಪಿಯನ್‌

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ(ಕೆಎಸ್‌ಬಿಬಿಎ) ಮಹಿಳೆಯರಿಗಾಗಿ ಆಯೋಜಿಸಿದ 7ನೇ ಮಾತೃ ಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಶುಕ್ರವಾರ ನಡೆದ ಫೈನಲ್‌ ಪಂದ್ಯದಲ್ಲಿ ರೈಲ್ವೇಸ್‌ ತಂಡ ಮೌಂಟ್ಸ್‌ ಕ್ಲಬ್‌ ವಿರುದ್ಧ 78-39 ಅಂಕಗಳಿಂದ ಜಯಗಳಿಸಿತು. ರೈಲ್ವೇಸ್‌ನ ಶ್ರುತಿ 28 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಸತ್ಯಾ 17 ಅಂಕ ಗಳಿಸಿದರು. ಮೌಂಟ್ಸ್ ಕ್ಲಬ್‌ನ ನಿಹಾರಿಕಾ 15, ಜಾನ್ವಿ 8 ಅಂಕ ಗಳಿಸಿದರು.

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್‌: ಸೆಮೀಸ್‌ಗೆ ಸಾತ್ವಿಕ್‌-ಚಿರಾಗ್‌ ಎಂಟ್ರಿ

3 ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ವಿರುದ್ಧ ಬೀಗಲ್ಸ್‌ ಬಿಸಿ ಜಯಭೇರಿ ಬಾರಿಸಿತು. ಬೀಗಲ್ಸ್‌ ತಂಡ ಮೇಖಲಾ 22, ಚಂದನಾ 19 ಅಂಕ ಗಳಿಸಿ ಗೆಲುವಿನ ರೂವಾರಿಗಳು ಎನಿಸಿಕೊಂಡರು. ವ್ಯಾನ್‌ಗಾರ್ಡ್ಸ್‌ ತಂಡದ ತಿಶಾ 19, ಪ್ರಿಯಾಂಕಾ 11 ಅಂಕ ಸಂಪಾದಿಸಿದರು.

ವಿಜೇತ ತಂಡಗಳಿಗೆ ಕೆಎಸ್‌ಬಿಬಿಎ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು, ನಟ ಪ್ರೇಮ್‌ ಟ್ರೋಫಿ, ನಗದು ಹಸ್ತಾಂತರಿಸಿದರು. ಚಾಂಪಿಯನ್‌ ಸೌತ್‌ ವೆಸ್ಟರ್ನ್‌ ರೈಲ್ವೇಸ್‌ ತಂಡ ₹60000 ನಗದು ಬಹುಮಾನ ಪಡೆದರೆ, 2ನೇ ಸ್ಥಾನಿಯಾದ ಮೌಂಟ್ಸ್‌ ಕ್ಲಬ್‌ ₹40,000, 3ನೇ ಸ್ಥಾನ ಪಡೆದ ಬೀಗಲ್ಸ್‌ ಬಿಸಿ ₹20000, 4ನೇ ಸ್ಥಾನಿ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ₹10000 ನಗದು ಬಹುಮಾನ ಪಡೆಯಿತು. ಟ್ರೋಫಿ ವಿತರಣೆ ಸಮಾರಂಭದಲ್ಲಿ ಪ್ರೇಮ್‌ ಅವರ ಪತ್ನಿ ಜ್ಯೋತಿ ಪ್ರೇಮ್‌, ಪುತ್ರಿ ಅಮೃತಾ ಪ್ರೇಮ್‌ ಉಪಸ್ಥಿತರಿದ್ದರು.
 

Latest Videos
Follow Us:
Download App:
  • android
  • ios