ಪ್ಯಾರಿಸ್ ಒಲಿಂಪಿಕ್‌ ಚಿನ್ನ ಗೆದ್ದಿದ್ದ ಬಾಕ್ಸರ್‌ ಖೆಲಿಫ್‌ ಹೆಣ್ಣಲ್ಲ ಗಂಡು!

ಪ್ಯಾರಿಸ್ ಒಲಿಂಪಿಕ್ಸ್‌ ಕ್ರೀಡಾಕೂಟದ ಮಹಿಳೆಯರ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ಅಲ್ಜೀರಿಯಾದ ಇಮಾನೆ ಖೆಲಿಫ್‌ ಅವರು ಗಂಡು ಎನ್ನುವುದು ಸಾಬೀತಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

Paris Olympic Gold Medalist Boxer Imane Khelif Has XY Chromosomes And Testicles Says Algerian Athletes Medical Report kvn

ಪ್ಯಾರಿಸ್‌: ಇತ್ತೀಚೆಗೆ ನಡೆದಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಲ್ಜೀರಿಯಾದ ಇಮಾನೆ ಖೆಲಿಫ್‌ ಒಬ್ಬ ಪುರುಷ ಎನ್ನುವುದು ವೈದ್ಯಕೀಯ ತಪಾಸಣೆ ಮೂಲಕ ದೃಢಪಟ್ಟಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಪ್ಯಾರಿಸ್‌ ಹಾಗೂ ಅಲ್ಜೀರಿಯಾದ ರಾಜಧಾನಿ ಆಲ್ಜೀರ್ಸ್‌ನ ಆಸ್ಪತ್ರೆಗಳಲ್ಲಿ ಇಮಾನೆಯ ದೇಹದ ಸಂಪೂರ್ಣ ಪರೀಕ್ಷೆ ನಡೆಸಲಾಗಿತ್ತು. ಆ ವರದಿಗಳಲ್ಲಿರುವ ಅಂಶಗಳು ಮಾಧ್ಯಮಗಳಿಗೆ ದೊರೆತಿದ್ದು, ಅದರಲ್ಲಿ ಇಮಾನೆ ಒಬ್ಬ ಪುರುಷ ಎಂದು ಸ್ಪಷ್ಟಪಡಿಸಲಾಗಿದೆ ಎನ್ನಲಾಗಿದೆ. ಈ ವರದಿಗಳು ಹೊರಬಿದ್ದ ಬೆನ್ನಲ್ಲೇ ಇಮಾನೆ ಗೆದ್ದಿದ್ದ ಚಿನ್ನದ ಪದಕವನ್ನು ಹಿಂಪಡೆಯಬೇಕು ಎನ್ನುವ ಕೂಗು ಸಾಮಾಜಿಕ ತಾಣಗಳಲ್ಲಿ ಶುರುವಾಗಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇಂದಿನಿಂದ ಬಂಗಾಳ ಚಾಲೆಂಜ್‌

ಲಿಂಗತ್ವ ವಿವಾದದ ನಡುವೆ ಚಿನ್ನ ಗೆದ್ದ ಬಾಕ್ಸರ್‌ ಇಮಾನೆ

ಲಿಂಗತ್ವ ವಿವಾದಗಳ ನಡುವೆಯೇ ಅಲ್ಜೇರಿಯಾದ ಬಾಕ್ಸರ್‌ ಇಮಾನೆ ಖೆಲಿಫ್‌ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು ಮಹಿಳೆಯರ 66 ಕೆ.ಜಿ. ವೆಲ್ಟೆರ್‌ವೇಟ್‌ ವಿಭಾಗದ ಫೈನಲ್‌ನಲ್ಲಿ ಚೀನಾದ ಯಾಂಗ್‌ ಲಿಯು ವಿರುದ್ಧ 5:0 ಅಂತದರಲ್ಲಿ ಗೆದ್ದರು. ಮಹಿಳೆಯಾಗಿ ಜನಿಸಿದ್ದರೂ ಪುರುಷ ಹಾರ್ಮೋನ್‌ ಜಾಸ್ತಿಯಿದ್ದ ಕಾರಣ, ಇಮಾನೆಯನ್ನು ಮಹಿಳೆಯರ ವಿಭಾಗದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮಹಿಳೆಯರ 66 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಇಟಲಿಯ ಏಂಜೆಲಾ ಕರಿನಿ ಕೇವಲ 46 ಸೆಕೆಂಡ್‌ಗಳಲ್ಲಿ ಪಂದ್ಯವನ್ನು ನಿಲ್ಲಿಸುವಂತೆ ಕೋರಿ, ಹೊರನಡೆದರು. ಇಮಾನೆಯ ಬಲವಾದ ಪಂಚ್‌ನಿಂದ ಏಂಜೆಲಾರ ಮೂಗು ಮುರಿಯಿತು ಎಂದು ಹೇಳಲಾಗುತ್ತಿದೆ. ಏಂಜೆಲಾ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಸಾವಿರಾರು ಮಂದಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ವಿರುದ್ಧ ಕಿಡಿಕಾರಿದ್ದರು. 

ಈ ಷೇರಿನ ಮೇಲೆ 2.5 ಕೋಟಿ ರುಪಾಯಿ ಹೂಡಿಕೆ ಮಾಡಿ 11 ಕೋಟಿ ರುಪಾಯಿ ಲಾಭ ಗಳಿಸಿದ ವಿರುಷ್ಕಾ ಜೋಡಿ

ಇಮಾನೆ ದೇಹದಲ್ಲಿ ಪುರುಷರಲ್ಲಿ ಕಂಡುಬರುವ ಎಕ್ಸ್‌ವೈ ಕ್ರೋಮೋಸೋಮ್ಸ್‌ (ವರ್ಣತಂತುಗಳು) ಇವೆ. ಲಿಂಗ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಇಮಾನೆಯನ್ನು ಜೈವಿಕವಾಗಿ ಪುರುಷ ಎನ್ನುವ ಕಾರಣಕ್ಕೆ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ.

Latest Videos
Follow Us:
Download App:
  • android
  • ios