ರಿಯೋ ಡಿ ಜನೈರೂ(ಸೆ.19): ರಿಯೋ ಪ್ಯಾರಾ ಒಲಿಂಪಿಕ್ಸ್ ಸೈಕ್ಲಿಂಗ್'ನಲ್ಲಿ ಇರಾನಿ ಆಟಗಾರನೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಗೆಲುವಿನ ಹತ್ತಿರಕ್ಕೆ ಬಂದಿದ್ದ 48 ವರ್ಷದ ಸರ್ಫರಾಜ್ ಬಹ್ಮಾನ್ ಗೊಲ್ಬರ್ನಾಜ್ ಪ್ರತಿಸ್ಪರ್ಧಿಯೊಂದಿಗೆ ಡಿಕ್ಕಿಯಾಗಿ ಕೆಳಕ್ಕೆ ಬಿಳ್ತಾರೆ. ಅಪಘಾತವಾದ ಕೂಡಲೇ ಸ್ಥಳದಲ್ಲೇ ಕ್ರೀಡಾಪಟುವಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಆದರೆ, ಸ್ವಲ್ಪ ಹೊತ್ತಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್ಸ್ ಸಮಿತಿ ತಿಳಿಸಿದೆ. 56 ವರ್ಷಗಳ ಪ್ಯಾರಾಒಲಿಂಪಿಕ್ಸ್ನ ಇತಿಹಾಸದಲ್ಲಿ ಕ್ರೀಡಾಪಟುವೊಬ್ಬರು ಮೃತಪಟ್ಟಿರುವುದು ಇದೇ ಮೊದಲು ಎಂದು ಹೇಳಲಾಗ್ತಿದೆ.
