ದಕ್ಷಿಣ ಆಫ್ರಿಕಾಗೆ ಭರ್ಜರಿ ಟಾರ್ಗೆಟ್ ನೀಡಿದ ಭಾರತ: ಪಾಂಡೆ,ಧೋನಿ ಅಮೋಘ ಆಟ

First Published 21, Feb 2018, 11:13 PM IST
Pandey Dhoni 50s boost IND to 188
Highlights

5ನೇ ವಿಕೇಟ್ ಜೊತೆಯಾಟ ಪ್ರಾರಂಭಿಸಿದ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಹಾಗೂ ವಿಕೇಟ್ ಕೀಪರ್ ಧೋನಿ  ದಕ್ಷಿಣಾ ಆಫ್ರಿಕಾ ಬೌಲರ್'ಗಳನ್ನು ಹಿಗ್ಗಾಮಗ್ಗಾ ದಂಡಿಸಿದರು.

ಸೆಂಚೂರಿಯನ್(ಫೆ.21): ಕರ್ನಾಟಕದ ಮನೀಶ್ ಪಾಂಡೆ ಹಾಗೂ ವಿಕೇಟ್ ಕೀಪರ್ ಧೋನಿ ಅವರ ಅದ್ಭುತ ಆಟದ ನೆರವಿನಿಂದ ಭಾರತ ತಂಡ ದ್ವಿತೀಯ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 189 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದ  ಹರಿಣಿ ತಂಡದ ನಾಯಕ ಜೆಪಿ ಡುಮಿನಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾಗೆ ಬ್ಯಾಟಿಂಗ್ ಆಹ್ವಾನಿಸಿದರು.2ನೇ ಓವರ್'ನಲ್ಲಿಯೇ ಆರಂಭಿಕ ಆಟಗಾರ ರೋಹಿತ್ ಶರ್ಮಾ ದಾಲಾ ಬೌಲಿಂಗ್'ನಲ್ಲಿ ಶೂನ್ಯಕ್ಕೆ ಔಟಾದರು. ನಂತರ ಆಗಮಿಸಿದ  ಸುರೇಶ್ ರೈನಾ(31), ಧವನ್(24) ಜೊತೆ ಸೇರಿ 2ನೇ ವಿಕೇಟ್ ನಷ್ಟಕ್ಕೆ 4.2 ಓವರ್'ಗಳಲ್ಲಿ 44 ರನ್ ಪೇರಿಸಿದಾಗ  ನಾಯಕ ಡುಮಿನಿ ಎಸೆತದಲ್ಲಿ ಧವನ್ ಬೆಹರ್ದೀನ್ ಕ್ಯಾಚಿತ್ತು ಔಟಾದರು.

ಏಕದಿನ ಸರಣಿಯಲ್ಲಿ ಉತ್ತಮ ಆಟವಾಡಿದ ವಿರಾಟ್ ಕೊಹ್ಲಿ ಕೇವಲ 1 ರನ್'ಗೆ ಕೀಪರ್'ಗೆ ಕ್ಯಾಚಿತ್ತು ನಿರ್ಗಮಿಸಿದರು. ರೈನಾ ಕೂಡ 11ನೆ ಓವರ್'ನಲ್ಲಿ ಪೆಲುಕ್ವಾಯೋ'ಗೆ ಎಲ್'ಬಿ ಆದರು.

ಪಾಂಡೆ, ಧೋನಿ ಉತ್ತಮ ಜೊತೆಯಾಟ

5ನೇ ವಿಕೇಟ್ ಜೊತೆಯಾಟ ಪ್ರಾರಂಭಿಸಿದ ಕರ್ನಾಟಕದ ಆಟಗಾರ ಮನೀಶ್ ಪಾಂಡೆ ಹಾಗೂ ವಿಕೇಟ್ ಕೀಪರ್ ಧೋನಿ  ದಕ್ಷಿಣಾ ಆಫ್ರಿಕಾ ಬೌಲರ್'ಗಳನ್ನು ಹಿಗ್ಗಾಮಗ್ಗಾ ದಂಡಿಸಿದರು. 5ನೇ ವಿಕೇಟ್'ಗೆ ಇವರಿಬ್ಬರು ಮುರಿಯದ ಜೊತೆಯಾಟದಲ್ಲಿ  98 ರನ್ ಬಾರಿಸಿದರು. 48 ಎಸೆತಗಳನ್ನು ಎದುರಿಸಿದ ಪಾಂಡೆ 3 ಭರ್ಜರಿ ಸಿಕ್ಸ್'ರ್ ಹಾಗೂ 6 ಬೌಂಡರಿಯೊಂದಿಗೆ 79 ರನ್ ಬಾರಿಸಿದರೆ ಕೇವಲ 28 ಎಸೆತಗಳನ್ನು ಎದುರಿಸಿದ ಧೋನಿ 3 ಸಿಕ್ಸ್'ರ್ ಹಾಗೂ 4 ಬೌಂಡರಿಯೊಂದಿಗೆ 52 ರನ್ ಸ್ಫೋಟಿಸಿದರು. 20 ಓವರ್'ಗಳಲ್ಲಿ ಭಾರತ ತಂಡ 188/4 ರನ್ ಗಳಿಸಿತು. ಹರಿಣಿ ತಂಡದ ಪರ ದಾಲಾ 28/2 ಯಶಸ್ವಿ ಬೌಲರ್ ಎನಿಸಿದರು.

ಸಂಕ್ಷಿಪ್ತ ಸ್ಕೋರ್

ಭಾರತ 20 ಓವರ್'ಗಳಲ್ಲಿ 188/4

(ಮನೀಶ್ ಪಾಂಡೆ ಅಜೇಯ 79, ಧೋನಿ ಅಜೇಯ 52, ರೈನಾ 31, ಧವನ್ 24, ದಾಲಾ 28/2 )

 

ವಿವರ ಅಪೂರ್ಣ

loader