ಭಾರತದ ಪರ ಪಾಕಿಸ್ತಾನ ವಿರುದ್ಧದ ಟೆಸ್ಟ್'ನಲ್ಲಿ ಮೊದಲ ಓವರ್'ನ ಮೊದಲ ಮೂರು ಎಸೆತಗಳಲ್ಲೇ ಮೂರು ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದ ದಾಖಲೆ ಕೂಡ ಪಠಾಣ್ ಹೆಸರಿನಲ್ಲಿದೆ

ಹೈದರಬಾದ್(ಫೆ.13): ರಾಷ್ಟ್ರೀಯ ತಂಡಕ್ಕೆ ಕಮ್'ಬ್ಯಾಕ್ ಮಾಡಲು ಸಾಕಷ್ಟು ಕಠಿಣ ಶ್ರಮಪಡುತ್ತಿರುವ ಟೀಂ ಇಂಡಿಯಾದ ವೇಗದ ಬೌಲರ್ ಇರ್ಫಾನ್ ಪಠಾಣ್ ಇತ್ತೀಚೆಗೆ ನಡೆದ ಕುತೂಹಲಕಾರಿ ಘಟನೆಯೊಂದನ್ನು ಮಾದ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.

ಲಾಹೋರ್'ನಲ್ಲಿ ಆಡುತ್ತಿದ್ದಾಗ ಹುಡುಗಿಯೊಬ್ಬಳು ಬಂದು ಮುಸ್ಲೀಂ ಆಗಿರುವ ನೀವು ಭಾರತದ ಪರವೇಕೆ ಆಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಳಂತೆ.

ಅದಕ್ಕೆ ಪಠಾಣ್, "ಭಾರತ ದೇಶವನ್ನು ಪ್ರತಿನಿಧಿಸುವುದೇ ಒಮದು ಹೆಮ್ಮೆಯ ಸಂಗತಿ. ಆ ಹುಡುಗಿಯ ಮಾತು ನಾನು ಮತ್ತಷ್ಟು ಉತ್ತಮ ಪ್ರದರ್ಶನ ನೀಡಲು ಈಗಲೂ ಪ್ರೇರೇಪಿಸುತ್ತಿದೆ. ಟೀಂ ಇಂಡಿಯಾ ಪರವಾಗಿ ಆಡುವಾಗ ಸಾಕಷ್ಟು ಬಾರಿ ಹೆಮ್ಮೆ ಪಡುವಂತಹ ಪ್ರದರ್ಶನ ನೀಡಿದ್ದೇನೆಂದು" ಬರೋಡದ ಆಲ್ರೌಂಡರ್ ಹೇಳಿದ್ದಾರೆ.

ಇದೇವೇಳೆ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡುವಾಗ ಮಾಜಿ ನಾಯಕ ಸೌರವ್ ಗಂಗೂಲಿಯಿಂದ ಕ್ಯಾಪ್ ಪಡೆದುಕೊಂಡದ್ದು ಎಂದೆಂದೂ ಮರೆಯಲಾರದ ಅದ್ಭುತ ಕ್ಷಣ ಎಂದು ಪಠಾಣ್ ತಿಳಿಸಿದ್ದಾರೆ.

ಭಾರತದ ಪರ ಪಾಕಿಸ್ತಾನ ವಿರುದ್ಧದ ಟೆಸ್ಟ್'ನಲ್ಲಿ ಮೊದಲ ಓವರ್'ನ ಮೊದಲ ಮೂರು ಎಸೆತಗಳಲ್ಲೇ ಮೂರು ವಿಕೆಟ್ ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದ ದಾಖಲೆ ಕೂಡ ಪಠಾಣ್ ಹೆಸರಿನಲ್ಲಿದೆ