ಶಮಿ ನನಗೆ ಪರಿಚಯವಿದೆ, ಭೇಟಿಯಾಗಿದ್ದು ನಿಜ, ಆದರೆ..? ಪಾಕ್ ಯುವತಿ ಹೇಳಿದ್ದೇನು..?

First Published 20, Mar 2018, 4:23 PM IST
Pakistan Woman Alishba Admits Meeting Shami
Highlights

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ಅಲಿಶ್ಬಾ, ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ವೇಳೆಯಿಂದಲೂ ಶಮಿ ತಮಗೆ ಪರಿಚಯ ಎಂದಿದ್ದಾಳೆ.

ನವದೆಹಲಿ(ಮಾ.20): ಪತ್ನಿಯಿಂದಲೇ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ಭಾರತ ಕ್ರಿಕೆಟ್ ತಂಡದ ವೇಗಿ ಮೊಹಮದ್ ಶಮಿ, ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಶಮಿ ಪತ್ನಿ ಹಸೀನ್ ಜಹಾನ್ ತಮ್ಮ ಆರೋಪದಲ್ಲಿ ಪ್ರಸ್ತಾಪಿಸಿರುವ ಪಾಕಿಸ್ತಾನಿ ಯುವತಿ ಅಲಿಶ್ಬಾ ದುಬೈನಲ್ಲಿ ಶಮಿಯನ್ನು ಭೇಟಿಯಾಗಿದ್ದಾಗಿ ಖಚಿತ ಪಡಿಸಿದ್ದಾಳೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ಅಲಿಶ್ಬಾ, ಕಳೆದ ವರ್ಷ ಚಾಂಪಿಯನ್ಸ್ ಟ್ರೋಫಿ ವೇಳೆಯಿಂದಲೂ ಶಮಿ ತಮಗೆ ಪರಿಚಯ ಎಂದಿದ್ದಾಳೆ.

‘ಶಮಿಯನ್ನು ದುಬೈನಲ್ಲಿ ನಾನು ಭೇಟಿ ಮಾಡಿದ್ದು ನಿಜ. ವೈಯಕ್ತಿಕ ಕಾರಣದಿಂದಾಗಿ ನಾನು ದುಬೈಗೆ ಭೇಟಿ ನೀಡುತ್ತಿರುತ್ತೇನೆ. ಲಕ್ಷಾಂತರ ಮಂದಿಯಂತೆ ನಾನೂ ಸಹ ಶಮಿ ಅಭಿಮಾನಿ. ನಮ್ಮಿಬ್ಬರ ನಡುವೆ ಉತ್ತಮ ಸ್ನೇಹವಿದೆ. ಆದರೆ ನಾನು ಶಮಿಗೆ ಹಣ ನೀಡಿದ್ದೇನೆ, ಅವರೊಂದಿಗೆ ಹೋಟೆಲ್ ಕೋಣೆಯಲ್ಲಿದ್ದೆ ಎನ್ನುವ ಆರೋಪಗಳೆಲ್ಲಾ ಸುಳ್ಳು. ಶಮಿ ಯಾರಿಗೂ ಸುಳ್ಳು ಹೇಳದ ವ್ಯಕ್ತಿ. ಆತ ದೇಶಕ್ಕೆ ಮೋಸ ಮಾಡಲು ಹೇಗೆ ಸಾಧ್ಯ’ ಎಂದು ಅಲಿಶ್ಬಾ ಹೇಳಿದ್ದಾಳೆ.

loader