ಪಾಕ್-ಲಂಕಾ ಪಂದ್ಯಕ್ಕೆ ಕರೆಂಟ್ ಇಲ್ಲ..!
2009ರ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ತಂಡವು ಪಾಕಿಸ್ತಾನ ಪ್ರವಾಸ ಕೈಗೊಂಡಿದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸರಿಯಾಗಿ ಕ್ರಿಕೆಟ್ ಆಯೋಜಿಸದೇ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕರಾಚಿ (ಅ.02): ದಶಕದ ಬಳಿಕ ಇಲ್ಲಿನ ಕರಾಚಿ ಮೈದಾನದಲ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯವೊಂದನ್ನು ಆಯೋಜಿಸಿದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.
ಇಮ್ರಾನ್ ಎಸೆತಕ್ಕೆ ಗಂಭೀರ್ ರಾಜಕೀಯ ಸಿಕ್ಸರ್, ಕಾಂಗ್ರೆಸ್‌ಗೂ ಏಟು!
ಹೌದು, ಶ್ರೀಲಂಕಾ ವಿರುದ್ಧ ಪಂದ್ಯದ ವೇಳೆ ವಿದ್ಯುತ್ ವೈಫಲ್ಯ ಉಂಟಾಗಿದ್ದು, ಫ್ಲಡ್‌ಲೈಟ್ ಇಲ್ಲದ ಕಾರಣದಿಂದ 2 ಬಾರಿ ಪಂದ್ಯ ಮೊಟಕುಗೊಂಡಿದ ಪ್ರಸಂಗ ನಡೆದಿದೆ. ಈ ವೇಳೆ ಆಟಗಾರರು ಮೈದಾನದಲ್ಲಿ ವಿದ್ಯುತ್ಗೆ ಕಾದು ಕುಳಿತಿದ್ದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ವೈಫಲ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ICC ಶಾಕ್: ಲಂಕಾ ಸ್ಟಾರ್ ಬೌಲರ್ ಒಂದು ವರ್ಷ ಬ್ಯಾನ್..!
ಲಂಕಾ ತಂಡ ಮೈದಾನಕ್ಕೆ ಆಗಮಿಸುವ ವೇಳೆ ಭಯೋತ್ಪಾದಕ ದಾಳಿ ಭೀತಿಯಿಂದ 20 ರಿಂದ 30 ವಾಹನಗಳಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಸೋಮವಾರ ನಡೆದ 2ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಪಾಕ್ 67 ರನ್ ಗೆಲುವು ಸಾಧಿಸಿತು. ಪಾಕಿಸ್ತಾನ 7 ವಿಕೆಟ್‌ಗೆ 305 ರನ್‌ಗಳಿಸಿದ್ದರೆ, ಲಂಕಾ 238ಕ್ಕೆ ಆಲೌಟ್ ಆಯಿತು.