Asianet Suvarna News Asianet Suvarna News

ಆಂಗ್ಲರ ಮಣಿಸಿ ಫೈನಲ್'ಗೆ ಲಗ್ಗೆಯಿಟ್ಟ ಪಾಕಿಸ್ತಾನ

ಲೀಗ್ ಹಂತದಲ್ಲಿ ಒಂದೂ ಪಂದ್ಯ ಸೋಲದೇ ಸೆಮಿಫೈನಲ್ ತಲುಪಿದ್ದ ಇಂಗ್ಲೆಂಡ್ ಹೀನಾಯ ಸೋಲುಂಡಿದೆ

Pakistan stun England to reach final

ಕಾರ್ಡಿಫ್(ಜೂ.14): ಪಾಕ್ ವೇಗಿಗಳ ಕರಾರುವಕ್ಕಾದ ದಾಳಿಗೆ ಮಂಡಿಯೂರಿದ ಆಂಗ್ಲರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್'ನಲ್ಲಿ ಮುಗ್ಗರಿಸಿದರೆ, ಇನ್ನೊಂದೆಡೆ ಪಾಕಿಸ್ತಾನ ಇದೇ ಮೊದಲ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿದೆ.

ಇಲ್ಲಿನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 8 ವಿಕೆಟ್‌ಗಳ ಗೆಲುವು ಸಾಧಿಸಿತು.

ಟಾಸ್ ಸೋತರು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಕೇವಲ 211 ರನ್‌'ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಪಾಕಿಸ್ತಾನ ಕೇವಲ 2 ವಿಕೆಟ್ ಕಳೆದುಕೊಂಡು ಅನಾಯಾಸವಾಗಿ ಗೆಲುವಿನ ಕೇಕೆ ಹಾಕಿತು.

ಇಂಗ್ಲೆಂಡ್ ನೀಡಿದ 212 ರನ್‌'ಗಳ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಅಜರ್ ಅಲಿ ಹಾಗೂ ಫಾಖರ್ ಜಮಾನ್ ಅದ್ಭುತ ಆರಂಭ ಒದಗಿಸಿದರು. ಮೊದಲ ವಿಕೆಟ್'ಗೆ ಈ ಜೋಡಿ ಕೇವಲ ೨೧.೧ ಓವರ್‌ಗಳಲ್ಲಿ 118 ರನ್ ಕಲೆಹಾಕಿತು. ಆರಂಭಿಕ ಆಟಗಾರರಾದ ಫಾಖರ್ ಜಮಾನ್(57 ರನ್) ಹಾಗೂ ಅಜರ್ ಅಲಿ (76 ರನ್) ವೈಯುಕ್ತಿಕ ಅರ್ಧ ಶತಕದ ಸಾಧನೆ ಮಾಡಿದರು. ಪಾಕ್ ಎರಡು ವಿಕೆಟ್ ಕಳೆದುಕೊಂಡ ಬಳಿಕ ಎಚ್ಚರಿಕೆಯ ಆಟವಾಡಿದ ಅಜಮ್ ಹಾಗೂ ಹಫೀಜ್ ಜೋಡಿ ತಂಡವನ್ನು ಯಶಸ್ವಿಯಾಗಿ ಫೈನಲ್'ಗೇರಿಸಿದರು.

ಇದಕ್ಕೂ ಮೊದಲು ಟಾಸ್ ಮೊದಲು ಬ್ಯಾಟಿಂಗ್'ಗಿಳಿದ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಅಲೆಕ್ಸ್ ಹೇಲ್ಸ್ ಕೇವಲ 13 ರನ್ ಗಳಿಸಿ ರುಮಾನ್ ರಯೀಸ್'ಗೆ ಚೊಚ್ಚಲ ಬಲಿಯಾದರು. ಜಾನಿ ಬೇರ್‌ಸ್ಟೋ 43 ಹಾಗೂ ಜೋ ರೂಟ್ 46 ರನ್ ಗಳಿಸಿ ತಂಡಕ್ಕೆ ನೆರವಾದರು. ಆದರೆ ಇವರ ವಿಕೆಟ್ ಪತನವಾಗುತ್ತಿದ್ದಂತೆ ದಿಢೀರ್ ಕುಸಿತ ಕಂಡ ಇಂಗ್ಲೆಂಡ್ 211ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು.

ಪಾಕ್ ಪರ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಅಲಿ 3 ವಿಕೆಟ್ ಕಬಳಿಸಿದರೆ, ಜುನೈದ್ ಖಾನ್ ಹಾಗೂ ರುಮಾನ್ ರಯೀಸ್ ತಲಾ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್ : 211/10

ಜೋ ರೂಟ್ : 46

ಜಾನಿ ಬೇರ್‌'ಸ್ಟೋ 43,

ಅಲಿ : 35/3

ಪಾಕಿಸ್ತಾನ :215/2

ಅಜರ್ ಅಲಿ : 76

ಫಾಖರ್ ಜಮಾನ್ : 57

ಜೇಕ್ ಬಾಲ್ : 37/1

ಪಂದ್ಯ ಶ್ರೇಷ್ಠ: ಹಸನ್ ಅಲಿ

Follow Us:
Download App:
  • android
  • ios