ಕರಾಚಿ[ಜೂ.27]: ಮುಂದಿನ ತಿಂಗಳು ತಾನು ಆತಿಥ್ಯ ವಹಿಸಲಿರುವ ವಿಶ್ವ ಕಿರಿಯರ ಸ್ಕ್ವಾಶ್ ಟೂರ್ನಿಗೆ ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡಲು ಭಾರತ ನಿರಾಕರಿಸಿದೆ. ಈ ಸಂಬಂಧ ಪಾಕಿಸ್ತಾನ ಸ್ಕ್ವಾಶ್ ಫೆಡರೇಷನ್(ಪಿಎಸ್‌ಎಫ್), ವಿಶ್ವ ಸ್ಕ್ವಾಶ್ ಫೆಡರೇಷನ್‌ನ ಸಹಾಯ ಕೋರಿದೆ. 

ತನ್ನ ಆಟಗಾರರಿಗೆ ವೀಸಾ ಕೊಡಿಸಿ, ಇಲ್ಲವೇ ಟೂರ್ನಿಯನ್ನೇ ರದ್ದುಗೊಳಿಸಿ ಎಂದು ಪಿಎಸ್‌ಎಫ್ ಆಗ್ರಹಿಸಿದೆ. ‘6 ಆಟಗಾರರ ಹಾಗೂ 3 ಸಿಬ್ಬಂದಿಯನ್ನು ವಿಶ್ವಕಪ್‌ಗೆ ಆಯ್ಕೆ ಮಾಡಲಾಗಿದೆ. ಆಟಗಾರರು ಅಂತಿಮ ಹಂತದ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ಬೆಳವಣಿಗೆ ಅವರ ಅಭ್ಯಾಸಕ್ಕೆ ಅಡ್ಡಿಯಾಗಿದೆ’ ಎಂದು ಪಿಎಸ್‌ಎಫ್ ಕಾರ್ಯ ದರ್ಶಿ ತಾಹಿರ್ ಸುಲ್ತಾನ್ ಹೇಳಿದ್ದಾರೆ.

ಕಿರಿಯರ ವಿಶ್ವಕಪ್ ಜು.18-23ರ ವರೆಗೂ ಚೆನ್ನೈನಲ್ಲಿ ನಡೆಯಲಿದೆ.