ಪಾಕ್ ಕ್ರಿಕೆಟಿಗರಿಗೆ ಸ್ಮಾರ್ಟ್ ವಾಚ್ ಬಳಸದಂತೆ ಐಸಿಸಿ ಸೂಚನೆ

Pakistan reprimanded over smart watches
Highlights

ಪಾಕ್ ಕ್ರಿಕೆಟಿಗರಾದ ಅಸಾದ್ ಶಫೀಕ್ ಹಾಗೂ ಬಾಬರ್ ಅಜಾಮ್’ಗೆ ಸ್ಮಾರ್ಟ್ ವಾಚ್ ಧರಿಸದಂತೆ ಐಸಿಸಿ ಸೂಚನೆ ನೀಡಿದೆ.  

ದುಬೈ(ಮೇ.26]: ಕ್ರಿಕೆಟಿಗರು ಸ್ಮಾರ್ಟ್ ವಾಚ್ ಧರಿಸಿ ಮೈದಾನಕ್ಕಿಳಿಯುವುದನ್ನು ಐಸಿಸಿ ನಿಷೇಧಿಸಿದೆ. ಇಂಗ್ಲೆಂಡ್ ವಿರುದ್ಧ ಲಂಡನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ನ ಮೊದಲ ದಿನ ಕೆಲ ಪಾಕಿಸ್ತಾನಿ ಕ್ರಿಕೆಟಿಗರು ಆ್ಯಪಲ್ ಸ್ಮಾರ್ಟ್ ವಾಚ್ ಧರಿಸಿ ಮೈದಾನಕ್ಕಿಳಿದಿದ್ದರು. ಸ್ಮಾರ್ಟ್ ವಾಚ್ ಮೊಬೈಲ್’ನೊಂದಿಗೆ ಸಂಪರ್ಕ ಹೊಂದಿರಲಿದೆ. ಇಂಟರ್‌ನೆಟ್ ಬಳಕೆಯಾಗಲಿದೆ. ವಾಚ್‌ನಲ್ಲಿ ಸಂದೇಶಗಳನ್ನು ಸ್ವೀಕರಿಸುವ ಸೌಲಭ್ಯವಿರಲಿದೆ. ಭ್ರಷ್ಟಾಚಾರ ಸಾಧ್ಯತೆ ಇರುವ ದೃಷ್ಟಿ ಯಿಂದ ಸ್ಮಾರ್ಟ್ ವಾಚ್‌ಗಳ ಬಳಕೆಗೆ ನಿರ್ಬಂಧ ಹೇರಿದೆ
ಪಾಕ್ ಕ್ರಿಕೆಟಿಗರಾದ ಅಸಾದ್ ಶಫೀಕ್ ಹಾಗೂ ಬಾಬರ್ ಅಜಾಮ್’ಗೆ ಸ್ಮಾರ್ಟ್ ವಾಚ್ ಧರಿಸದಂತೆ ಐಸಿಸಿ ಸೂಚನೆ ನೀಡಿದೆ.  

loader