ದೆಹಲಿ(ಆ.22): ಪ್ರತಿ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಒಂದಲ್ಲಾ ಒಂದು ದಾಖಲೆ ನಿರ್ಮಿಸುತ್ತಿದ್ದಾರೆ. ಇಷ್ಟೇ ಅಲ್ಲ ದಿಗ್ಗಜರ ದಾಖಲೆಗಳನ್ನು ಪುಡಿ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಹಾಗೂ ದಾಖಲೆಯ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಕೊಹ್ಲಿ ಎಲ್ಲಾ ದಾಖಲೆಗಳನ್ನು ಮುರಿಯಲಿದ್ದಾರೆ. ಒದರೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿರುವ ಒಂದು ದಾಖಲೆ ಬ್ರೇಕ್ ಮಾಡಲು ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಅಲುಗಾಡುತ್ತಿದೆ ರಿಕಿ ಪಾಂಟಿಂಗ್ ದಾಖಲೆ; ಹೊಸ ಇತಿಹಾಸಕ್ಕೆ ಸಜ್ಜಾದ ಕೊಹ್ಲಿ!

ವಿಶ್ವ ಕ್ರಿಕೆಟ್‌ನಲ್ಲಿ ಸದ್ಯ ವಿರಾಟ್ ಕೊಹ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್. ಕೊಹ್ಲಿ ಬ್ಯಾಟಿಂಗ್ ಪ್ರದರ್ಶನ, ರನ್ ಗಳಿಕೆ, ಸೆಂಚುರಿ ಸಿಡಿಸುವ ಪರಿ ನೋಡಿದರೆ ಕೊಹ್ಲಿಯನ್ನು  ಮೀರಿಸುವ ಆಟಾಗರ ಸದ್ಯಕ್ಕಿಲ್ಲ. ಕೊಹ್ಲಿ ಅದ್ಬುತ ಬ್ಯಾಟಿಂಗ್ ಪ್ರದರ್ಶನದಿಂದ ಸೆಂಚುರಿ ಮೇಲೆ ಸೆಂಚುರಿ ಸಿಡಿಸುತ್ತಿದ್ದಾರೆ. ಈ ಮೂಲಕ ಸಚಿನ್ ಸೆಂಚುರಿ ದಾಖಲೆಯನ್ನು ಬ್ರೇಕ್ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಆದರೆ ಸಚಿನ್ ತೆಂಡುಲ್ಕರ್ ಅವರ ಗರಿಷ್ಠ ಟೆಸ್ಟ್ ಪಂದ್ಯ ಆಡಿದ ದಾಖಲೆಯನ್ನು ಮುರಿಯಲು ಮಾತ್ರ ಕೊಹ್ಲಿಗೆ ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಇದನ್ನೂ ಓದಿ: ಒಂದು ದಶಕದಲ್ಲಿ ಕೊಹ್ಲಿ 20 ಸಾವಿರ ರನ್; ದಿಗ್ಗಜರ ದಾಖಲೆ ಪುಡಿ ಪುಡಿ!

ಸಚಿನ್ ತೆಂಡುಲ್ಕರ್ 200 ಟೆಸ್ಟ್ ಪಂದ್ಯದಿಂದ 15921 ರನ್ ಸಿಡಿಸಿದ್ದಾರೆ. 51 ಶತಕ ಹಾಗೂ 68 ಅರ್ಧಶತಕ ಸಿಡಿಸಿದ್ದಾರೆ. ಸಚಿನ್ 200 ಟೆಸ್ಟ್ ಪಂದ್ಯದ  ದಾಖಲೆ ಕೊಹ್ಲಿ ಮಾತ್ರವಲ್ಲ ಇತರರಿಂದಲೂ ಸಾಧ್ಯವಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ. ಕೊಹ್ಲಿ ಹಾಗೂ ಸ್ಮಿತ್ ನಡುವೆ ಅತ್ಯುತ್ತಮ ಬ್ಯಾಟ್ಸ್‌ಮನ್ ಪಟ್ಟಕ್ಕಾಗಿ ಪೈಪೋಟಿ ಇದೆ. ಆದರೆ ಸೆಹ್ವಾಗ್ ಪ್ರಕಾರ, ಕೊಹ್ಲಿಯೇ ಬೆಸ್ಟ್ ಎಂದಿದ್ದಾರೆ.