ಡಿ.8 ರಿಂದ 18ರವರೆಗೆ ನಡೆಯಲಿರುವ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳಲು ಪಾಕಿಸ್ತಾನ ಸರ್ಕಾರದ ಅಂತರ ಪ್ರಾಂತೀಯ ಸಮನ್ವಯ ಸಚಿವಾಲಯ ನಿರಾಕ್ಷೇಪಣ ಪತ್ರವೊಂದನ್ನು ನೀಡಿರುವ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್‌ಗೆ ಮಾಹಿತಿ ನೀಡಿದೆ.

ಕರಾಚಿ(ನ.19): ಭಾರತದ ಲಕ್ನೋದಲ್ಲಿ ಮುಂದಿನ ತಿಂಗಳಿಂದ ಆರಂಭವಾಗುವ ಕಿರಿಯರ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲು, ಪಾಕ್ ಸರ್ಕಾರ ಅನುಮತಿ ನೀಡಿದೆ.

ಡಿ.8 ರಿಂದ 18ರವರೆಗೆ ನಡೆಯಲಿರುವ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳಲು ಪಾಕಿಸ್ತಾನ ಸರ್ಕಾರದ ಅಂತರ ಪ್ರಾಂತೀಯ ಸಮನ್ವಯ ಸಚಿವಾಲಯ ನಿರಾಕ್ಷೇಪಣ ಪತ್ರವೊಂದನ್ನು ನೀಡಿರುವ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಷನ್‌ಗೆ ಮಾಹಿತಿ ನೀಡಿದೆ.

ಪಾಕ್ ಹಾಕಿ ಮಂಡಳಿ ಟೂರ್ನಿಯಲ್ಲಿ ಭಾಗವಹಿಸುವುದಕ್ಕಾಗಿ ತಂಡವನ್ನು ಕಳುಹಿಸಿಕೊಡಲು ಭಾರತವನ್ನು ಕೇಳಿದೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜಕೀಯ ಸಂಬಂಧಗಳು ಹಳಸಿವೆ. ಈ ದಿಸೆಯಲ್ಲಿ ಪಾಕ್ ಹಾಕಿ ಫೆಡರೇಷನ್ ಸರ್ಕಾರದ ಅನುಮತಿ ಪತ್ರವನ್ನು ಕೋರಿತ್ತು.