2017ರ ಸೆ.30ರೊಳಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಲಿವೆ.
ಕರಾಚಿ(ಜ.11): ಮುಂಬರುವ 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ತಂಡ ನೇರ ಅರ್ಹತೆ ಪಡೆಯುವ ಪ್ರಯತ್ನದಲ್ಲಿದೆ.
ಇದೇ ಶುಕ್ರವಾರದಿಂದ ವಿಶ್ವದ ನಂ.1 ಶ್ರೇಯಾಂಕದ ತಂಡವಾದ ಆಸ್ಟ್ರೇಲಿಯಾ ಎದುರು 5 ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಸದ್ಯ ಪಾಕಿಸ್ತಾನ ತಂಡ 89 ಪಾಯಿಂಟ್ಸ್'ಗಳಿಂದ 8ನೇ ಸ್ಥಾನ ಪಡೆದಿದೆ.
ಎರಡು ಅಂಕಗಳಿಂದ ಹಿಂದೆ ಬಿದ್ದಿರುವ ಬಾಂಗ್ಲಾದೇಶ 9ನೇ ಮತ್ತು ವೆಸ್ಟ್ ಇಂಡೀಸ್ ನಂತರದ ಸ್ಥಾನದಲ್ಲಿವೆ.
2017ರ ಸೆ.30ರೊಳಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ 7 ಸ್ಥಾನ ಪಡೆಯುವ ತಂಡಗಳು ವಿಶ್ವಕಪ್'ಗೆ ನೇರ ಅರ್ಹತೆ ಗಿಟ್ಟಿಸಲಿವೆ.
ಇಂಗ್ಲೆಂಡ್, ವೇಲ್ಸ್ ಆತಿಥ್ಯದಲ್ಲಿ 2019ರ ಮೇ. 30ರಿಂದ ಜುಲೈ 15ರವರೆಗೆ ಪಂದ್ಯಾವಳಿ ನಡೆಯಲಿದೆ.